ಪಾವಗಡ
ಕಲುಷಿತ ನೀರು ಕುಡಿದು ಹತ್ತು ಕುರಿ ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಭೂಗಡೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಭೂಗಡೂರು ಗ್ರಾಮದ ಕುರಿಗಾಹಿ ನಾಗರಾಜು ಮಂಗಳವಾರ ಬೆಳಗ್ಗೆ ಎಂದಿನಂತೆ ಕುರಿಗಳನ್ನು ಮೇಯಿಸಲು ಹೋಗಿದ್ದು, ಮಧ್ಯಾಹ್ನದ ಹೊತ್ತಿಗೆ ಸಮೀಪದ ಹೊಸಕೆರೆ ಗ್ರಾಮದ ಕೆರೆಯಲ್ಲಿ ಕುರಿಗಳಿಗೆ ನೀರು ಕುಡಿಸಿದ್ದಾರೆ. ಕೆರೆಗೆ ಬಂದಿದ್ದ ಮಳೆ ನೀರಿಗೆ ಕ್ರಿಮಿನಾಶಕ ಬೆರೆತ ಹಿನ್ನೆಲೆಯಲ್ಲಿ ಹತ್ತು ಕುರಿಗಳು ಸಾವನ್ನಪ್ಪಿದ್ದು, ಇನ್ನೂ ಐದು ಕುರಿಗಳು ಅಸ್ವಸ್ಥಗೊಂಡಿರುತ್ತವೆ.
ಕುರಿಗಾಹಿ ನಾಗರಾಜು, ಹೊಸಕೆರೆ ಗ್ರಾಮದ ಕೆರೆ ಸಮೀಪದಲ್ಲಿ ರೈತರ ಟೊಮೋಟೋ ತೋಟವಿದ್ದು, ಬೆಳೆಗೆ ಕ್ರಿಮಿನಾಶಕ ಸಿಂಪಡಿಸಿರುತ್ತಾರೆ. ಅಂದೇ ಮಳೆ ಬಂದ ಹಿನ್ನೆಲೆಯಲ್ಲಿ ಕ್ರಿಮಿನಾಶಕ ಕೊಚ್ಚಿಹೋಗಿ ಕೆರೆಯ ನೀರಿನಲ್ಲಿ ಬೆರೆತಿದೆ. ಮೇವಿಗಾಗಿ ಹೋದ ಕುರಿಗಳು ಅದೇ ನೀರನ್ನು ಕುಡಿದು ಹತ್ತು ಕುರಿಗಳು ಸಾವನ್ನಪ್ಪಿವೆ. ನಮ್ಮ ಕುಟುಂಬದ ಜೀವನಾಧಾರವಾಗಿದ್ದ ಕುರಿಗಳ ಸಾವಿನಿಂದ ನಮಗೆ ದಿಕ್ಕು ತೋಚದಂತಾಗಿದೆ. ಆದ್ದರಿಂದ ಸಂಬಂಧಪಟ್ಟವರು ಸೂಕ್ತ ಪರಿಹಾರ ನೀಡಬೇಕೆಂದು ಕಣ್ಣಿರು ಹಾಕಿರುತ್ತಾರೆ.ಪಶು ವೈದ್ಯಕೀಯ ಇಲಾಖೆಯ ಸಿದ್ದಲಿಂಗಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
