ಗುಬ್ಬಿ
ಅಕ್ರಮ ಮಧ್ಯ ಮಾರಾಟ ಮತ್ತು ಜೂಜಾಟವನ್ನು ತಡೆಗಟ್ಟುವುದರ ಜೊತೆಗೆ ಯಾವುದೆ ರೀತಿಯ ಅಕ್ರಮ ಚಟುವಟಿಕೆಗಳು ನಡೆಯದಂತೆ ಸೂಕ್ತವಾದ ಕಾನೂನು ಕ್ರಮಗಳನ್ನು ಕೈಗೊಳ್ಳುವುದಾಗಿ ಪಿಎಸ್‍ಐ ಹರೀಶ್ ತಿಳಿಸಿದರು.
ಪಟ್ಟಣದ ಪೋಲೀಸ್ ಠಾಣೆಯಲ್ಲಿ ಏರ್ಪಡಿಸಿದ್ದ ದಲಿತರ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಪಟ್ಟಣ ಸೇರಿದಂತೆ ಗ್ರಾಮೀಣ ಪ್ರಧೇಶಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ಅತ್ಯವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ತಿಳಿಸಿದರು.
ಮುಗ್ದ ದಲಿತರನ್ನು ತಮ್ಮ ಸ್ವಾರ್ಥ ಸಾದನೆಗೆ ಬಳಸಿಕೊಳ್ಳುತ್ತಿರುವ ವ್ಯಕ್ತಿಗಳಿಂದ ದೂರವಿರುವಂತೆ ಅರಿವು ಮೂಢಿಸುವಂತಹ ಕೆಸಲವನ್ನು ಪ್ರಜ್ಞಾವಂತ ದಲಿತ ಮುಖಂಡರು ಮತ್ತು ದಲಿತ ಸಂಘಟನೆಗಳು ಮಾಡಬೇಕಿದೆ ಎಂದು ತಿಳಿಸಿದ ಅವರು ಗ್ರಾಮೀಣ ಭಾಗಗಳಲ್ಲಿ ನಡೆಯುವ ಜಾತ್ರೆ ಮತ್ತು ಹಬ್ಬಗಳಲ್ಲಿ ಅಕ್ರಮವಾಗಿ ಜೂಜಾಡುವುದನ್ನು ಶಾಶ್ವತವಾಗಿ ನಿಯಂತ್ರಿಸಲು ಸೂಕ್ತವಾದ ಕಾನೂನು ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಮಹಿಳಾ ದೌರ್ಜನ್ಯದ ಬಗ್ಗೆ ದೂರುಗಳು ಬಂದಲ್ಲಿ ಅತಿ ತುರ್ತಾಗಿ ಕ್ರಮವಹಿಸಲಾಗುವುದೆಂದು ತಿಳಿಸಿದ ಅವರು ಪಟ್ಟಣದ ಸರ್ಕಲ್ ಮತ್ತು ಬಸ್ ನಿಲ್ದಾಣಗಳಲ್ಲಿ ಈಗಾಲೆ ಸಿಸಿ ಟಿವಿ ಅಳವಢಿಸಲಾಗಿದ್ದು ಯಾವುದೆ ರೀತಿಯ ಅಕ್ರಮ ರೀತಿಯ ಅಕ್ರಮ ಚಟುವಟಿಗಳು ನಡೆಯದಂತೆ ಅಗತ್ಯ ಎಚ್ಚರಿಕೆ ವಹಿಸಿರುವುದಾಗಿ ತಿಳಿಸಿದರು. ರಸ್ತೆ ಸುರಕ್ಷತೆ ಸೇರಿದಂತೆ ಸಂಚಾರ ನಿಯಮಗಳ ಬಗ್ಗೆ ಈಗಾಗಲೆ ಅರಿವು ಮೂಢಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ದಲಿತ ಮುಖಂಡರಾದ ಜಿ.ಸಿ.ನಾಗರಾಜು, ಜಿ.ವಿ.ಮಂಜುನಾಥ್, ಬಿ.ಲೋಕೇಶ್, ಶಿವಪ್ಪ, ಕೃಷ್ಣಪ್ಪ, ನಾಗರಾಜು, ಲಕ್ಷ್ಮಣ್, ಎಸ್.ಐ ಕೃಷ್ಣಮೂರ್ತಿ, ಆರಾಧ್ಯ, ನಾರಾಯಣ್, ಬೋರಯ್ಯ ಸೇರಿದಂತೆ ದಲಿತ ಮುಖಂಡರು ಬಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/06/photo2.gif)