ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ ಕುಣಿಗಲ್ ವಿದ್ಯಾರ್ಥಿ..!

ಕುಣಿಗಲ್

    ಕೊರೋನಾ ರೋಗದಿಂದ ಭಾರಿ ಆತಂಕ ಸೃಷ್ಟಿಸಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಎದೆಗುಂದದೆ ದಿಟ್ಟತನದಿಂದ ಓದಿದ ರೈತನ ಮಗನೊಬ್ಬ ಜಿ.ಎಂ. ಮಹೇಶ್ ಎಂಬಾತ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 625ಕ್ಕೆ 624 ಅಂಕ ಗಳಿಸಿ ರಾಜ್ಯಕ್ಕೇ ಎರಡನೇ ರ್ಯಾಂಕ್ ಪಡೆಯುವ ಮೂಲಕ ತಾಲ್ಲೂಕಿನ ಕೀರ್ತಿ ಪಥಾಕೆಯನ್ನು ರಾಜ್ಯ ಮಟ್ಟದಲ್ಲಿ ಎತ್ತಿಡಿದಿದ್ದಾನೆ .

    ಕುಣಿಗಲ್ ತಾಲೂಕು ಕೊತ್ತಗೆರೆ ಹೋಬಳಿ ಗುನ್ನಾಗರೆ ಗ್ರಾಮದ ರೈತ ದಂಪತಿಗಳಾದ ಮಾಯಣ್ಣ ಮತ್ತು ಶಶಿಕಲಾ ಎಂಬುವರ ಎರಡನೇ ಮಗ ಕುಣಿಗಲ್ ಪಟ್ಟಣದ ವಕ್ಕಲಿಗ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಜ್ಞಾನಭಾರತಿ ಪ್ರೌಢಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಮಹೇಶ್ ಜಿ.ಎಂ. ಎಂಬಾತ ತನ್ನ ಓದಿನ ಜೀವನವನ್ನು ಇಲ್ಲಿನ ಎಲ್‍ಕೆಜಿ ಯಿಂದ ಜ್ಞಾನಭಾರತಿ ಶಾಲೆಯಲ್ಲೇ ವ್ಯಾಸಂಗದ ಮಾಡಿ ಎಸ್‍ಎಸ್‍ಎಲ್‍ಸಿಯಲ್ಲಿ ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆಯುವ ಮೂಲಕ ಶಾಲೆಗೂ ತಾಲ್ಲೂಕಿಗೂ ಕೀರ್ತಿ ತಂದಿದ್ದಾನೆ. ಈತ ಗಳಿಸಿರುವ ಅಂಕಗಳಲ್ಲಿ ಕನ್ನಡ-125. ಇಂಗ್ಲೀಸ್-99, ಗಣಿತ-100, ವಿಜಾÐನ-100, ಸಮಾಜ ವಿಜ್ಞಾನ-100 ಹಾಗೂ ಹಿಂದಿ-100 ಅಂಕಗಳಿಸಿದ್ದಾನೆ.

    ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿ ಮಹೇಶ್ ನಿತ್ಯ ಶಾಲೆಯಲ್ಲಿ ಶಿಕ್ಷಕರು ಮಾಡುತ್ತಿದ್ದ ಪಾಠವನ್ನು ಗಮನಿಟ್ಟು ಕೇಳುತ್ತಿದ್ದೆ ಅಂದಿನ ಪಾಠವನ್ನು ಅಂದೇ ಮನದಟ್ಟುಮಾಡಿಕೊಂಡು ಓದುತ್ತಿದ್ದೆ ಜೊತೆಗೆ ಮನೆಯಲ್ಲಿ ನಾಲ್ಕರಿಂದ ಐದು ಗಂಟೆಗಳ ಕಾಲ ಓದುತ್ತಿದ್ದೆ ಪರೀಕ್ಷಯ ಸಂದರ್ಭದಲ್ಲಿ ಕೊರೊನಾ ಲಾಕ್‍ಡೌನ್ ಆಗಿ ಪರೀಕ್ಷೆ ಮುಂದೂಡಲ್ಪಟ್ಟದ್ದರಿಂದ ಹೆಚ್ಚಿನ ಸಮಯ ಸಿಕ್ಕಿದ ಪರಿಣಾಮ ಹಲವು ಬಾರಿ ಓದುವಂತಾಯಿತು ಇದರಿಂದ ತಲೆಯಲ್ಲಿ ನೆನಪ ಅಚ್ಚಾಗುವ ಮೂಲಕ ಇದು ಕೂಡ ನನಗೆ ಹೆಚ್ಚು ಅಂಕ ಗಳಿಸಲು ಸಹಾಯವಾಯಿತು ಎನ್ನುತ್ತಾನೆ.

    ಸಂತೋಷಗೊಂಡ ತಂದೆ ಮಾಯಣ್ಣ ಮಾತನಾಡುತ್ತ ಹಳ್ಳಿಯಲ್ಲಿ 4 ಎಕರೆ ಜಮೀನು ಇದೆ. ತೆಂಗು ಮತ್ತು ಅಡಿಕೆ ಬೆಳೆಯನ್ನು ಬೆಳೆಯುತ್ತೇನೆ. ನನ್ನ ಮಗ ಮಹೇಶ್ ಎಲ್‍ಕೆಜಿಯಿಂದಲೂ ಶೇ 99ರಷ್ಟು ಅಂಕಗಳನ್ನೇ ಪಡೆದುಕೊಂಡು ಬಂದಿದ್ದಾನೆ. ಯಾರೊಂದಿಗೆ ಬೇರೆಯದೇ ಹೆಚ್ಚು ಓದಿನ ಕಡೆಯೇ ಗಮನಹರಿಸುತ್ತಿದ್ದ ಮನೆಯಲ್ಲಿ ಪ್ರತಿದಿನ ರಾತ್ರಿ 11 ಗಂಟೆ ವರೆಗೆ ಹಾಗೂ ಬೆಳಗ್ಗಿನ ಜಾವ 5ಗಂಟೆ ಎದ್ದು ಓದುತ್ತಿದ್ದ. ಅತನ ಪರಿಶ್ರಮಕ್ಕೆ ಈಗ ರಾಜ್ಯಕ್ಕೆ ಎರಡನೇ ರ್ಯಾಂಕ್ ಸಿಕ್ಕಿರುವುದು ನಮಗೆ ಖುಷಿ ತಂದಿದೆ ಎಂದರು.
ಜ್ಞಾನಭಾರತಿ ಶಾಲೆಯ ಮುಖ್ಯ ಶಿಕ್ಷಕರಾದ ಗೋವಿಂದೆಗೌಡ, ಕೆ.ಜಿ.ಪ್ರಕಾಶ್‍ಮೂರ್ತಿ, ಸೇರಿದಂತೆ ಒಕ್ಕಲಿಗ ಸಂಘದ ಎಲ್ಲಾ ಪದಾಧಿಕಾರಿಗಳು ಮಹೇಶ್‍ನ ಸಾಧನೆಗೆ ಅಭಿನಂದನೆ ಸಲ್ಲಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap