ಶ್ರೀ ಸಿದ್ಧಗಂಗಾ ಮಹಿಳಾ ಕಾಲೇಜಿಗೆ ನ್ಯಾಕ್ ಸಮಿತಿಯ ಭೇಟಿ

ತುಮಕೂರು:

        ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ತಿನ ಸತ್ಯಶೋಧನಾ ಸಮಿತಿಯ ಸದಸ್ಯರು ದಿನಾಂಕ.25.03.2019 ಮತ್ತು 26.03.2019ರಂದು ನಗರದ ಶ್ರೀ ಸಿದ್ಧಗಂಗಾ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿಗೆ ಭೇಟಿ ನೀಡಿದ್ದರು.

          ಸತ್ಯಶೋಧನಾ ಸಮಿತಿಯ ಸದಸ್ಯರಾಗಿ ಮಹಾರಾಷ್ಟ್ರ ಪುಣೆಯಲ್ಲಿರುವ ಡೆಕನ್ ಸ್ನಾತಕೋತ್ತರ ಪದವಿ ಮತ್ತು ಸಂಶೋಧನಾ ಸಂಸ್ಥೆಯ ಉಪಕುಲಪತಿಗಳಾದ ಡಾ.ವಸಂತಶಿಂಧೆಯವರು, ಒರಿಸ್ಸಾ ಸಂಬಲ್‍ಪುರ್‍ನ ವೀರ್‍ಸುರೇಂದ್ರಸಾಯಿ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಪ್ರವೀಣ್‍ಕರ್‍ರವರು, ಗುಜರಾತ್‍ನ ವಾಪಿಯ ಶ್ರೀಮತಿ ಸಿ.ಡಿ.ಜೆ.ರಾಫೆಲ್ ಕಲಾ ಮತ್ತು ಶ್ರೀಮತಿ ಐ.ಎಸ್.ಆರ್.ಎ. ರಾಫೆಲ್ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೇಮಾಲಿ.ಎ.ದೇಸಾಯಿಯವರು ಭೇಟಿ ನೀಡಿ 2013-14ನೇ ಸಾಲಿನಿಂದ 2018-19ನೇ ಸಾಲಿನವರೆಗೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಸಿ.ಜಯಸ್ವಾಮಿ ಮತ್ತು ಸಮಿತಿಯ ಸಂಚಾಲಕರಾದ ಪ್ರೊ.ಕೆ.ಆರ್.ಮಾಧವ ಇವರಿಗೆ ವರದಿಯನ್ನು ಸಲ್ಲಿಸಿರುತ್ತಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link