ಎನ್ ಟಿ ಆರ್ ಯೂತ್ ಐಕಾನ್ಸ್ ವತಿಯಿಂದ ಗ್ರಾಮೀಣ ಪ್ರತಿಭೆಗೆ ಸಹಾಯ ಹಸ್ತ

ಪಾವಗಡ;-

     ತಾಲ್ಲೂಕಿನ ಪಿ.ರೊಪ್ಪ ಗ್ರಾಮದ ಗೋಲ್ಲ ಜನಾಂಗದ ಬಾಲಕೃಷ್ಣ ಹಾಲು ಮತ್ತು ಸೊಪ್ಪು ಮಾರಾಟ ಮಾಡಿಕೊಂಡು ಜೀವನ ಮಾಡುತ್ತಿರುವ ತಮ್ಮ ಮಗ ಬಿ.ಚಾಂದೀಶ್ ನನ್ನು ಕಷ್ಟ ಪಟ್ಟು ಓದಿಸಿದ್ದು,ದ್ವಿತೀಯ ಪಿ.ಯು.ಸಿ.ನಲ್ಲಿ (ಶೇಕಡ 93 ರಷ್ಟು ಅಂಕಗಳಿಸಿ ಉನ್ನತ ಶೇಣಿಯಲ್ಲಿ ಪಾಸಾಗಿದ್ದು,ಮುಂದಿನ ವಿದ್ಯಾಭ್ಯಾಸಕ್ಕಾಗಿ ಆರ್ಥಿಕವಾಗಿ ಹಿಂದುಳಿದಿದ್ದಾರೆ ಎಂಬ ಸುದ್ದಿಯನ್ನು ಪ್ರಜಾಪ್ರಗತಿಯಲ್ಲಿ ಪ್ರಕಟವಾಗಿತ್ತು

    ಇದನ್ನು ಮನಗಂಡ ಎನ್.ಟಿ.ಆರ್ ಯೂತ್ ಐಕನ್ಸ್ ಯುವಕ ಸಂಘ ಹಾಗೂ ಹೆಲ್ಪ್ ಸೊಸೈಟಿ ಇವರ ಸಹಯೋಗದಲ್ಲಿ ತೆಲುಗು ಚಿತ್ರ ನಟ ಯಂಗ್ ಟೈಗರ್ ಎನ್.ಟಿ.ಆರ್ ಹುಟ್ಟದ ಹಬ್ಬದ ಪ್ರಯುಕ್ತ ಸೋಮವಾರ ಪಿ.ರೊಪ್ಪ ಗ್ರಾಮದ ವಿದ್ಯಾರ್ಥಿ ಬಿ.ಚಾಂದೀಶ್ ಮನೆಗೆ ಬೇಟಿ ನೀಡಿ 20.000 ರೂಗಳನ್ನು ನಗದು ರೂಪದಲ್ಲಿ ಸಹಾಯ ಧನ ನೀಡಿದ್ದಾರೆ.

    ಎನ್.ಟಿ.ಆರ್ ಯೂತ್ ಅಧ್ಯಕ್ಷ ಅನಿಲ್ ಮಾತನಾಡಿ ಎನ್ ಟಿ.ಆರ್ ಹುಟ್ಟು ಹಬ್ಬದ ಪ್ರಯುಕ್ತ ಪ್ರತಿ ವರ್ಷ ಯುವಕ ಸಂಘದಿಂದ ಆಶ್ರಮಗಳಿಗೆ ಅನ್ನದ ಸಂತಾರ್ಪಣೆ ಮತ್ತು ಬಡವಿದ್ಯಾರ್ಥಿಗಳಿಗೆ ಸಹಾಯ ಧನ ನೀಡುತ್ತಿದ್ದೇವೆ ಎಂದರು.ಈ ಸಂದರ್ಭದಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಹಾಗೂ ಕಾರ್ತಿಕ್,ವೀರ,ರಾಜು,ಭರತ್,ರಂಗ, ರಾಜು, ಮಲ್ಲಿ,ಬಾಸ್ಕರ್ ,ಮಾಂತೇಶ್,ಮಾರುತಿ ಮತ್ತು ರೊಪ್ಪ ಗ್ರಾಮದ ಗ್ರಾಮಸ್ಥರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap