ಮಾರಿಕಾಂಬ ದೇಗುಲದಲ್ಲಿ ಬ್ಯಾನ್ ಆದ ನೋಟು ಪತ್ತೆ!

ಹುಳಿಯಾರು:

    ನೋಟ್ ಬ್ಯಾನ್ ಆಗಿ ಮೂರು ವರ್ಷ ಕಳೆಯುತ್ತಾ ಬಂದರೂ ಭಕ್ತರು ಮಾತ್ರ ತಮ್ಮಲ್ಲಿರುವ ಹಳೆಯ ನೋಟುಗಳನ್ನು ದೇವಾಲಯದ ಹುಂಡಿಗೆ ಹಾಕುವುದು ಮಾತ್ರ ನಿಲ್ಲಿಸಿಲ್ಲ. ಇದಕ್ಕೆ ಹಲವೆಡೆಗಳಲ್ಲಿ ಆಗಾಗ ಹಳೆ ನೋಟುಗಳು ಪತ್ತೆಯಾಗುತ್ತಿರುವುದು ನಿದರ್ಶನವಾಗಿದೆ.

     ಈಗ ಈ ದೇಗುಲದ ಹುಂಡಿಗಳಲ್ಲಿ ಬ್ಯಾನ್ ಆದ ನೋಟುಗಳು ಪತ್ತೆಯಾದ ಸುದ್ದಿ ಸರಣಿಗೆ ಹುಳಿಯಾರು ಕೋಡಿಪಾಳ್ಯದ ಮಾರಿಕಾಂಭ ದೇವಾಲಯ ಹೊಸ ಸೇರ್ಪಡೆಯಾಗಿದ್ದು ಬ್ಯಾನ್ ಆದ 500 ಮತ್ತು 1000 ರೂ. ಮುಖಬೆಲೆಯ ನೋಟುಗಳು ಹುಂಡಿಯಲ್ಲಿ ಪತ್ತೆಯಾಗಿದೆ.

    ಪತ್ರಿವರ್ಷದಂತೆ ಈ ವರ್ಷವೂ ಸಹ ಕೋಡಿಪಾಳ್ಯದ ಮಾರಿಕಾಂಭ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಸಲಾಯಿತು. ಈ ಹುಂಡಿಯಲ್ಲಿ ಬ್ಯಾನ್ ಆದ 500 ಮುಖಬೆಲೆಯ 67 ನೋಟುಗಳು, 1000 ಮುಖಬೆಲೆಯ 41 ನೋಟುಗಳು ಸೇರಿ ಒಟ್ಟು 74,500 ರೂ. ಸಂಗ್ರಹವಾಗಿತ್ತು.

    ಹುಳಿಯರಿನ ಕೋಡಿಪಾಳ್ಯದ ಧ್ಯಾನನಗರಿಯಲ್ಲಿ ಕರ್ನಾಟಕದ ಏಕೈಕ ಶ್ರೀ ಕಂಕಾಳಿ, ಶ್ರೀ ತುಳಜಾಭವಾನಿ ದೇಗುಲವಿದೆ. ಅಲ್ಲದೆ ಭಾರತ ದೇಶದ ಅತೀ ಎತ್ತರದ ಅನಂತಪದ್ಮನಾಭನ ಬೃಹತ್ ಮೂರ್ತಿ, ಶ್ರೀಮಾರಿಕಾಂಭ ದೇವಿ ಸಹ ಇಲ್ಲಿದೆ. ಹಾಗಾಗಿ ರಾಜ್ಯ ಸೇರಿ ಹೊರ ರಾಜ್ಯದಿಂದಲೂ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಪ್ರತಿ ಮಂಗಳವಾರ, ಶುಕ್ರವಾರದಂದು ಅಪಾರ ಸಂಖ್ಯೆ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ.

     ಅದರಂತೆ ದೇವಿಗೆ ಭಕ್ತರು ತಮ್ಮ ಹರಕೆ ತೀರಿಸುವ ವೇಳೆಯಲ್ಲಿ ಚಲಾವಣೆಯಲ್ಲಿಲ್ಲದ ನೋಟುಗಳನ್ನು ಹಾಕಿ ಭಕ್ತಿ ಸಮರ್ಪಿಸಿದ್ದಾರೆ. ಇದರರ್ಥ ಸಾರ್ವಜನಿಕರ ಬಳಿ ಇನ್ನೂ ಹಳೆಯ ನೋಟು ಇರುವುದು ಇದರಿಂದ ಗೊತ್ತಾಗುತ್ತಿದೆ. ಈ ಹಳೆಯ ನೋಟುಗಳನ್ನು ಬೇರೆ ಕಡೆ ಕೊಡಲು ಸಾಧ್ಯವಾಗದೇ ಈ ರೀತಿಯಾಗಿ ದೇವರ ಹುಂಡಿಯಲ್ಲಿ ಹಾಕುತ್ತಿದ್ದಾರೆ ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಗಂಗಾಧರ್ ತಿಳಿಸಿದರು.ಹುಂಡಿ ಎಣಿಕೆ ಸಂದರ್ಭದಲ್ಲಿ ಶ್ರೀ ಮಾತಾ ಟ್ರಸ್ಟ್‍ನ ಅಧ್ಯಕ್ಷ ಗಂಗಾಧರ್, ಟ್ರಸ್ಟಿ ರಾಜಣ್ಣ, ಅರ್ಚಕ ದರ್ಶನ್‍ಪ್ರಜಾರಿ, ಸಿಬ್ಬಂದಿ ಭಾಗ್ಯ, ಸೆಕ್ಯೂರಿಟಿ ಗಾರ್ಡ್ ಪ್ರಕಾಶ್ ಸೇರಿದಂತೆ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ