ತುರುವೇಕೆರೆ
ಬಾಣಸಂದ್ರ ರಸ್ತೆಯ ಕೋಡಿ ಬಳಿಯ ಮುಕ್ತಿಧಾಮದ ಸಮೀಪದಲ್ಲಿ ಇರುವ ಕೀರ್ತಿಕುಮಾರ್ ಎಂಬುವವರ ತೋಟದಲ್ಲಿ ಸುಮಾರು 2 ವರ್ಷಗಳಿಂದ ಬೆಳೆಸಲಾಗಿದ್ದ ಐದು ನೂರಕ್ಕೂ ಹೆಚ್ಚಿನ ಅಡಕೆ ಸಸಿಗಳು, ಹತ್ತಾರು ಬಾಳೆ ಗಿಡಗಳು, ತೋಟಕ್ಕೆ ಹಾಕಲಾಗಿದ್ದ ಹನಿ ನೀರಾವರಿ ಉಪಕರಣಗಳು, ಪೈಪುಗಳು, ವಾಟರ್ ಟ್ಯಾಂಕ್ನ್ನು ಕಡಿದು ಹಾಳು ಮಾಡಲಾಗಿದೆ. ಅಲ್ಲದೆ ತೋಟದಲ್ಲಿ ಇಡಲಾಗಿದ್ದ ಒಂದು ಸಿಂಟೆಕ್ ಟ್ಯಾಂಕ್, ಪೈಪುಗಳನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ.
ಈ ಕೃತ್ಯಕ್ಕೆ ಸಂಬಂಧಿಸಿದಂತೆ ಕೀರ್ತಿ ಕುಮಾರ್ ಸ್ಥಳೀಯ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಅನುಮಾನಾಸ್ಪದ ವ್ಯಕ್ತಿಗಳ ಕುರಿತೂ ಸಹ ಕೀರ್ತಿಕುಮಾರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುಮಾರು ಸಾವಿರಾರು ರೂ.ಗಳಿಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಪೊಲೀಸರು ಕೂಡಲೆ ಈ ದುಷ್ಕøತ್ಯ ಎಸಗಿರುವವರನ್ನು ಪತ್ತೆ ಹಚ್ಚಿ ಸೂಕ್ತ ಶಿಕ್ಷೆ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
