ಪ್ರಥಮ ಬಾರಿಗೆ ಜನ ಸಂಪರ್ಕ ಸಭೆಗೆ ಬಂದ ಪರಮೇಶ್ವರ್

0
23

ಕೊರಟಗೆರೆ ;-

     ಡಾ,ಜಿ ಪರಮೇಶ್ವರ್ ಉಪ ಮುಖ್ಯಮಂತ್ರಿ ಮತ್ತು ಗೃಹ ಸಚಿವರಾಗಿ ಆಯ್ಕೆಯಾದ ಬಳಿಕ ಇದೆ ಪ್ರಥಮ ಬಾರಿಗೆ ಬುಧವಾರದಂದು ಸ್ವಕ್ಷೇತ್ರ ಕೊರಟಗೆರೆಯ ತಮ್ಮ ಶಾಸಕರ ಕಛೇರಿಯಲ್ಲಿ , ಸಾರ್ವಜನಿಕರಿಂದ ಕುಂದು ಕೊರತೆ ಆಲಿಸುವ ಸಲುವಾಗಿ ಅರ್ಜಿ ಸ್ವೀಕಾರ ಮಾಡಿದರು.

     ಪಟ್ಟಣದ ಶಾಸಕರ ಕಛೇರಿಯಲ್ಲಿ ಮಧ್ಯಾಹ್ನ 2 ಗಂಟೆಗೆ ಆಗಮಿಸಿದ ಪರಮೇಶ್ವರ್ ನಗುಮುಖದಲ್ಲಿಯೆ ಸರದಿ ಸಾಲಿನಲ್ಲಿ ನಿಂತಿದ್ದ ನೂರಾರು ಜನ ಸಾರ್ವಜನಿಕರಿಂದ ಅರ್ಜಿ ಸ್ವೀಕಾರ ಮಾಡಿ ಸ್ಥಳದಲ್ಲಿಯೆ ಜಿಲ್ಲಾಧಿಕಾರಿಗಳಾದ ರಾಕೇಶ್ ಕುಮಾರ್‍ರವರನ್ನು ಕೂರಿಸಿಕೊಂಡು ತಾಲ್ಲೂಕ್ ಮಟ್ಟದ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಅತೀ ತ್ವರಿತವಾಗಿ ಆಹ್ವಾಲಿಗೆ ಮಾರ್ಗಸೂಚಿ ನೀಡುವಂತೆ ಸೂಚಿಸಿದರು.

      ಪಟ್ಟಣದ ಕಛೇರಿ ಆವರಣದಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ಕೃಷಿ ಯಂತ್ರೋಪಕರಣಗಳಾದ ಮಿನಿ ಟ್ರ್ಯಾಕ್ಟರ್, ಪವರ್ ಟ್ರಿಲ್ಲರ್ ಸೇರಿದಂತೆ ಇನ್ನಿತರ ಸವಲತ್ತು ವಿತರಣೆ ಮಾಡಿದ ಪರಮೇಶ್ವರ್, ಟ್ರಿಲ್ಲರ್ ಹಾಗೂ ಮಿನಿ ಟ್ರ್ಯಾಕ್ಟರ್ ಗಳನ್ನು ಸ್ವತಹ ತಾವೆ ಚಾಲನೆ ಮಾಡಿ ರೈತರಿಗೆ ಹುರಿದುಂಬಿಸಿದರು, ಸರ್ಕಾರದಿಂದ ಬರುವಂತಹ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ರೈತರಿಗೆ ತಿಳಿಸಿದರಲ್ಲದೆ, ಅಧಿಕಾರಿಗಳಿಗೆ ರೈತರ ಪರ ಕೆಲಸ ನಿರ್ವಹಿಸುವಂತೆ ಸ್ಥಳದಲ್ಲಿಯೆ ಎಚ್ಚರಿಕೆ ನೀಡಿದರು.

       ನಂತರ ಕಛೇರಿಯಲ್ಲಿ ಕೂತು ಸಾರ್ವಜನಿಕ ಅಹವಾಲು ಸ್ವೀಕರಿಸಿ, ಜಿಲ್ಲಾ ಹಾಗೂ ತಾಲ್ಲೂಕ್ ಮಟ್ಟದ ಎಲ್ಲಾ ಇಲಾಖಾವಾರು ಅಧಿಕಾರಿಗಳ ಮುಖೇನ ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲಿಯೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಿದರು ಜೊತೆಗೆ ಅತಿ ತ್ವರಿತವಾಗಿ ಸಾರ್ವಜನಿಕರ ಅಹವಾಲು ಪರಿಹಾರ ಮಾರ್ಗ ಸೂಚಿಸುವಂತೆ ಅಧಿಕಾರಿಗಳಿಗೆ ತಿಳಿಸಿದರಲ್ಲದೆ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಅರ್ಜಿ ಹೊತ್ತು ಬೆಂಗಳೂರಿಗೆ ಬರಬೇಕಿಲ್ಲ ಪ್ರತಿ 15 ದಿನಗಳಿಗೊಮ್ಮೆ ಕೊರಟಗೆರೆ ಕಛೇರಿಯಲ್ಲಿಯೇ ಕೂತು ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು.

       ಅಹವಾಲು ಸ್ವೀಕಾರದ ನಂತರ ಹೊರನಡೆದ ಪರಮೇಶ್ವರ್ ರವರಿಗೆ ಕೆಲವು ಮುಖಂಡರು ಹಾಗೂ ಕಾರ್ಯಕರ್ತರು ತೋವಿನಕೆರೆ ಹೋಬಳಿಯ ಉಪ ತಹಶಿಲ್ದಾರ್, ಕಂದಾಯ ತನಿಕಾಧಿಕಾರಿ ಹಾಗೂ ಗ್ರಾಮಲೆಕ್ಕಿಗರ ಧೋರಣೆಯಿಂದ ಬಡ ಕುಟುಂಬಗಳು ಮತ್ತು ನಿರ್ಗತಿಕರು ಕಷ್ಟ ಅನುಭೊಗಿಸುತ್ತಿದ್ದಾರೆ, ಸಂಧ್ಯಾ ಸುರಕ್ಷಾ, ಅಂಗವಿಕಲ ಮತ್ತು ವೃದ್ದಾಪ್ಯ ವೇತನ ನೀಡುವಲ್ಲಿ ನಿರ್ಲಕ್ಷ ವಹಿಸುತ್ತಿದ್ದು ಬಡವರ ಆಶ್ರಯಕ್ಕೆ ಬಾರದ ಇಂತಹ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಇಲ್ಲವೆ ಅಮಾನತುಗೊಳಿಸಿ ಎಂದು ಒತ್ತಾಯಿಸಿದರು.

       ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ರಾಕೇಶ್ ಕುಮಾರ್, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳಾದ ದಿವ್ಯಾ ಗೋಪಿನಾಥ್, ತಹಶಿಲ್ದಾರ್ ನಾಗರಾಜು, ತಾ,ಪಂ ಕಾರ್ಯ ನಿರ್ವಹಣಾಧಿಕಾರಿ ಶಿವಪ್ರಕಾಶ್ ಸೇರಿದಂತೆ ತಾಲ್ಲೂಕ್ ಮಟ್ಟದ ಎಲ್ಲಾ ಅಧಿಕಾರಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here