ಜಿಲ್ಲಾಧಿಕಾರಿಗಳಿಂದ ತಾಲ್ಲೂಕಿನ ಮತಗಟ್ಟೆ ಪರಿಶೀಲನೆ …!!!

0
16

ಪಾವಗಡ :-

        ಲೋಕಸಭ ಚುನಾವಣೆಯ ಪೂರ್ವ ಸಿದ್ದತಾ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾದಿಕಾರಿಗಳಾದ ರಾಕೇಶ್ ಕುಮಾರ್‍ರವರು ತಾಲ್ಲೂಕಿನ ವಿವಿಧ ಮತಘಟ್ಟೆಗಳಿಗೆ ಹಾಗೂ ಚೆಕ್ ಪೋಸ್ಟ್‍ಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.ರಾಜ್ಯದಲ್ಲಿ ಎರಡು ಹಂತಗಳಲ್ಲಿ ನಡೆಯಲಿರುವಾ ಸಂಸತ್ ಚುನಾವಣೆಯ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಗಡಿ ತಾಲ್ಲೂಕು ಪಾವಗಡದಲ್ಲಿ ಚುನಾವಣೆಯ ಪೂರ್ವಸಿದ್ದತೆಗಳನ್ನು ತುಮಕೂರು ಜಿಲ್ಲಾದಿಕಾರಿ ರಾಕೇಶ್ ಕುಮಾರ್ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿಗಳಾದ ಕೋನ ವಂಶಿ ಕೃಷ್ಣರವರು ಶುಕ್ರವಾರ ಬೇಟಿ ನೀಡಿ ಸೂಕ್ಷ್ಮ ಮತ್ತು ಆತೀ ಸೂಕ್ಷ್ಮ ಮತಘಟ್ಟೆಗಳನ್ನು ಪರಿಶೀಲನೆ ನಡೆಸಿದರು.

       ತಾಲ್ಲೂಕಿನ ರಾಜವಂತಿ ಚೆಕ್ ಪೋಸ್ಟ್ , ದೊಮ್ಮತಮರಿ ಚೆಕ್ ಪೋಸ್ಟ್ , ವೆಂಕಟಾಪುರ ಮತಘಟ್ಟೆ , ಗುಮ್ಮಘಟ್ಟ ಮತ ಕೇಂದ್ರ ಮತ್ತು ಎಸ್.ಸಿ ಕಾಲೋನಿಯನ್ನು ಪರಿಶೀಲನೆ ನಡೆಸಿ , ಪಾವಗಡ ಪಟ್ಟಣದ ರೋಪ್ಪ ಗ್ರಾಮದ ಮತ ಕೇಂದ್ರ ಹಾಗೂ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮತಕೇಂದ್ರಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಮದ್ಯಾಹ್ನದ ಸಮಯವಾದ ಕಾರಣ ಶಾಲಾ ಮಕ್ಕಳು ಬಿಸಿಯೂಟ ಸೇವನೆ ಮಾಡುತ್ತಿದ್ದಾ ವೇಳೆ ಮಕ್ಕಳನ್ನು ಏನೂ ಆಡುಗೆ ಮಾಡಿದ್ದಾರೆಂದು ಕೇಳಿದಾ ಜಿಲ್ಲಾದಿಕಾರಿಗಳು ಆಡುಗೆ ಕೊಣೆಯ ಬಳಿ ತೆರಳಿ ಹಾಲಿನ ಪೌಡರ್ ಪರಿಶೀಲಿಸಿ ಮಕ್ಕಳಿಗಾಗಿ ತಯಾರಿಸಿದ್ದ ಪಾಯಸವನ್ನು ಜಿಲ್ಲಾದಿಕಾರಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿ ಸೇವಿಸಿ ನೆರೆದಿದ್ದ ಇತರೇ ಆದಿಕಾರಿಗಳನ್ನು ಬೆರಗಾಗುವಂತೆ ಮಾಡಿದರು.

        ಈ ಸಂದರ್ಭದಲ್ಲಿ ಮದುಗಿರಿ ಡಿವೈಎಸ್‍ಪಿ ಶ್ರೀನಿವಾಸ , ತಹಶೀಲ್ದರ್ ಟಿ.ಎಸ್.ಕುಂಬಾರ್ , ಸಿಪಿಐಗಳಾದ ಸಿ.ವೆಂಕಟೇಶ್ , ಶ್ರೀಶೈಲಮೂರ್ತಿ , ಆರ್.ಐ.ಗೀರಿಶ್ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here