ಚಿಕ್ಕನಾಯಕನಹಳ್ಳಿ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ನಮ್ಮಲ್ಲಿರುವ ಭಿನ್ನಾಭಿಪ್ರಾಯವನ್ನು ತೊರೆದು ಪಕ್ಷದ ಗೆಲುವಿಗೆ ಪಣ ತೊಡುವಂತೆ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ಕರೆ ನೀಡಿದರು.
ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ನಡೆದ ಮುಂಬರುವ ಲೋಕಸಭಾ ಚುನಾವಣೆಯ ಪೂರ್ವ ಸಿದ್ದತೆಯ ತರಬೇತಿ ಶಿಬಿರದಲ್ಲಿ ಮಾತನಾಡಿ ಬೂತ್‍ಮಟ್ಟದಲ್ಲಿ ಕಾರ್ಯಕರ್ತರು ಯಾವ ರೀತಿ ಕೆಲಸ ಮಾಡಬೇಕು ವಿರೋಧ ಪಕ್ಷಗಳು ಅಲ್ಪಸಂಖ್ಯಾತರು ಹಾಗೂ ಕಾಂಗ್ರೇಸ್ ಕಾರ್ಯಕರ್ತರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.
ಪ್ರಧಾನ ಮಂತ್ರಿ ಮೋಧಿಯವರು ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ, ಅಧಿಕಾರಕ್ಕೆ ಬಂದ ನಂತರ ನೋಟ್ ಅಮಾನಿಕರಣ, ಕಪ್ಪು ಹಣ ತರುತ್ತೇನೆ ಎಂದು ಹೇಳಿ ಇದುವರೆಗೆ ಕಪ್ಪು ಹಣವನ್ನೇ ತರಲಾಗಲಿಲ್ಲ. ನೋಟ್ ಬ್ಯಾನ್ ಮಾಡಿದುದ್ದರಿಂದ ಬಡವರಿಗೆ ತೊಂದರೆಯಾಗಿ ಅನೇಕರು ಸಾವನ್ನಪ್ಪಿದ್ದಾರೆ ಕಾಶ್ಮಿರದ ಪುಲ್ವಾಮದಲ್ಲಿ ಘಟನೆಯನ್ನು ಬಿ.ಜೆ.ಪಿ ರಾಜಕಾರಣ ಮಾಡಲು ಹೊರಟಿರುವುದು ದುರದೃಷ್ಟಕರ ಎಂದರು.
ರಾಜ್ಯ ಕೌಶಲ್ಯಾಭಿವೃದ್ದಿ ಸಂಸ್ಥೆಯ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ ಕಾಶ್ಮೀರದಲ್ಲಿ ನಡೆದ ಘಟನೆಯ ಬಗ್ಗೆ ರಾಜ್ಯಪಾಲರಾಗಲಿ, ರಾಷ್ಟ್ರಪತಿಗಳಾಗಲಿ, ಪ್ರಧಾನಮಂತ್ರಿಗಳಾಗಲಿ ಮಧ್ಯಾಹ್ನ 1.30ಕ್ಕೆ ನಡೆದ ಫುಲ್ವಾಮದ ಘಟನೆಯಲ್ಲಿ 44 ಜನ ನಮ್ಮ ಯೋಧರು ನಿಧನ ಹೊಂದಿದರು ಸಂಜೆ 6 ಗಂಟೆಯವರೆಗೆ ಯಾವ ಹೇಳಿಕೆಯನ್ನು ನೀಡಲಿಲ್ಲ ಅವರು ಎಲ್ಲಿಗೆ ಹೋಗಿದ್ದರು, ಎಂದು ಪ್ರಶ್ನಿಸಿದ ಅವರು ಬಿ.ಜೆ.ಪಿಗೆ ರಾಷ್ಟ್ರ ಪ್ರೇಮ ಹಾಗೂ ದೇಶಭಕ್ತಿಯನ್ನು ಗುತ್ತಿಗೆ ನೀಡಿಲ್ಲ 60 ವರ್ಷ ದೇಶವನ್ನು ಕಾಂಗ್ರೇಸ್ ಪಕ್ಷ ಆಳ್ವಿಕೆ ಮಾಡಿದೆ. 44 ಜನ ನಮ್ಮ ಯೋಧರು ನಿಧನ ಹೊಂದಿದ್ದರೂ ಮರುದಿನ ಮಹಾರಾಷ್ಟ್ರ ಹಾಗೂ ಛತ್ತಿಸ್‍ಗಡದಲ್ಲಿ ಬಿಜೆಪಿ ರ್ಯಾಲಿಯಲ್ಲಿ ರಾಜನಾಥಸಿಂಗ್, ಅಮಿತ್‍ಷಾ ಭಾಗವಹಿಸಿದ್ದರು. ಇದರಿಂದ ಅವರಿಗೆ ರಾಷ್ಟ್ರದ ಬಗ್ಗೆ ಗೌರವವಿಲ್ಲ ಎಂದರು.
ತಾಲ್ಲೂಕು ಉಸ್ತುವಾರಿ ಹನುಮಂತಪ್ಪ ಮಾತನಾಡಿ ಮುಂಬರುವ ಲೋಕಸಭಾ ಚುನಾವಣೆಗೆ ಯುವಕರಿಗೆ ಮಾರ್ಗದರ್ಶನ ನೀಡಲು ಶಿಬಿರ ಆಯೋಜಿಸಲಾಗಿದ್ದು, ರಾಜೀವ್ ಗಾಂಧಿಯವರ ಆದೇಶದ ಮೇರೆಗೆ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಶಿಭಿರ ಹಮ್ಮಿಕೊಳ್ಳಲಾಗಿದ್ದು,ಪಕ್ಷದ ಬೆಳವಣಿಗೆಗೆ ಸಲಹೆ ನೀಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಅಧ್ಯಕ್ಷ ಸಿ.ಬಸವರಾಜು, ವೆಂಕಟೇಶ್ ಬಾಲಕೃಷ್ಣ, ಶಶೀಧರ್, ತೀರ್ಥಪುರ ವಾಸು, ಶೇಷನಾಯಕ್, ಚಂದ್ರಶೇಖರರೆಡ್ಡಿ, ಕೆ.ಜಿ.ಕೃಷ್ಣೇಗೌಡ, ಬ್ರಹ್ಮಾನಂದ ಸಿ.ಡಿ.ಚಂದ್ರಶೇಖರ್, ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
