ಸಾವಯವ ರೈತರಿಗೆ ಸಿರಿಧಾನ್ಯ ಬಿತ್ತನೆ ಬೀಜ ವಿತರಣೆ

ಹುಳಿಯಾರು

      ಚಿಕ್ಕನಾಯಕನಹಳ್ಳಿ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮತ್ತು ಹುಳಿಯಾರು ಶ್ರೀ ಕೃಷಿಸಿರಿ ಸಾವಯವ ಕೃಷಿಕರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಹೋಬಳಿಯ ಯಳನಡು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸಾವಯವ ಸಂಘದ ರೈತರಿಗೆ ಮಣ್ಣು ಪರೀಕ್ಷೆಯ ಬಗ್ಗೆ ತರಬೇತಿ ಮತ್ತು ಸಿರಿಧಾನ್ಯ ಬೀಜ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

       ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿಗಳಾದ ನಾಗಪ್ಪ ದೇಸಾಯಿಯವರು ಸಾವಯವ ರೈತರಿಗೆ ಮಣ್ಣು ಪರೀಕ್ಷೆಯ ಮಹತ್ವ, ಮಣ್ಣು ಪರೀಕ್ಷೆ ಮಾಡುವ ವಿಧಾನ ಸಾವಯವ ಗೊಬ್ಬರ ತಯಾರಿಕೆ ಮತ್ತು ಬಳಕೆಯ ಬಗ್ಗೆ ಮಾಹಿತಿಯನ್ನು ನೀಡಿದರು.ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿಗಳಾದ ಸಿ.ಎಸ್.ಪ್ರಶಾಂತ್ ಅವರು ಸಾವಯವ ರೈತರಿಗೆ ಕೊರಲೆ, ಬರಗು, ಊದಲು, ಸಾವೆ, ನವಣೆ ಬಿತ್ತನೆ ಬೀಜಗಳನ್ನು ವಿತರಿಸಿದರು.

      ಸಿರಿಧಾನ್ಯ ಯೋಜನಾಧಿಕಾರಿಗಳಾದ ಮಹಾಬಲೇಶ್ವರವರು ಸಾವಯವ ನೊಂದಣಿಯ ಬಗ್ಗೆ ಮತ್ತು ಕ್ರಿಯಾ ಯೋಜನೆಯ ಬಗ್ಗೆ ಮಾಹಿತಿ ನೀಡಿ ಸಿರಿಧಾನ್ಯ ಮಾಹಿತಿ ಕೈಪಿಡಿಯನ್ನು ಬಿಡುಗಡೆ ಮಾಡಿದರು.

      ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿಸಿರಿ ಸಾವಯವ ಕೃಷಿಕರ ಸಂಘ ಅಧ್ಯಕ್ಷ ಎಂ.ಸಿ.ಬಸವರಾಜು ವಹಿಸಿದ್ದರು. ಹಾಲಿನ ಡೇರಿ ಅಧ್ಯಕ್ಷ ವೈ.ಆರ್.ಮಲ್ಲಿಕಾರ್ಜುನಯ್ಯ, ಹುಳಿಯಾರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಯಾದ ತಿಪ್ಪೇಸ್ವಾಮಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಿರಿಧಾನ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಬಾಲಚಂದ್ರ, ಸಂಘದ ಎಲ್ಲಾ ನಿರ್ದೇಶಕರು ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link