ಮಧುಗಿರಿ:
ತುಮಕೂರು ಜಿಲ್ಲೆಯ ಸರ್ವೋತೋಮುಖ ಅಭಿವೃದ್ದಿಗೆ ಮೈತ್ರಿ ಅಭ್ಯರ್ಥಿಯಾದ ಹೆಚ್.ಡಿ.ದೇವೇಗೌಡರನ್ನು ಬೆಂಬಲಿಸಿ ಎಂದು ಕೌಶಲ್ಯ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದರು.
ಪಟ್ಟಣದ ತಮ್ಮ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ಶೂನ್ಯ ಅಭಿವೃದ್ದಿ ಮಾಡಿದ್ದಾರೆ, ಅವರು ಬರೀ ಸುಳ್ಳಿನ ಕಂತೆಯನ್ನು ಹೇಳುತ್ತಾ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಲಿದ್ದಾರೆ. ಅದನ್ನು ನಂಬ ಬೇಡಿ ಮತ್ತು ನೀವು ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ರಾಹುಲ್ ಗಾಂಧಿ ಕೈ ಬಲ ಪಡಿಸಿ ಎಂದರು.
ರಾಜ್ಯ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ಪ್ರೊ. ರಾಧಕೃಷ್ಣ ಮಾತನಾಡಿ ಹಿಂದೂ ಧರ್ಮದ ಆರಾಧ್ಯ ದೈವ ಶ್ರೀ ರಾಮನನ್ನು ಅವಮಾನಿಸಿದ ಬಿಜೆಪಿಯನ್ನು ಬೆಂಬಲಿಸಿ ಬೇಡಿ, ಹಿಂದೂಗಳನ್ನು ಮೋಸ ಮಾಡುವಂತಹ ಪಕ್ಷ. ಇಲ್ಲಿ ಜಾತೀಯತೆ, ಹೆಣ್ಣಮಕ್ಕಳನ್ನು ಕೀಳಾಗಿ ನೋಡುವಂತಹ ಮನಸ್ಸುಗಳನ್ನು ಬೆಳಿಸುವ ಪಕ್ಷಕ್ಕೆ ಮಾನವೀಯತೆ ಇದೆಯಾ ಎಂದರು.ಇದೇ ಸಂದರ್ಭದಲ್ಲಿ ಜಿಪಂ ಸದಸ್ಯ ಹೆಚ್.ಕೆಂಚಮಾರಯ್ಯ ಕಾಂಗ್ರೆಸ್ ಲೀಗಲ್ ಸೆಲ್‍ನ ಮುಖ್ಯಸ್ಥ ಅಹಮದ್ ಹಾಗೂ ಮುಖಂಡ ಗೋವಿಂದೇಗೌಡ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
