ತಿಪಟೂರು ಲೈಫ್ ಸ್ಟಾರ್ ರಿಯೋಲಿಟಿ ಶೋ

0
18

ತಿಪಟೂರು :

      ಜಾಗೃತಿ ಸೇವಾ ಸಂಸ್ಥೆ ತಿಪಟೂರು, ತಿಪಟೂರು ಲೈಫ್ ಸ್ಟಾರ್ ಹಾಗೂ ಬೆಂಗಳೂರಿನ ಕ್ಷತ್ರೀಯ ಆಶ್ರಮ ಸಂಸ್ಥೆಯ ಸಹಯೋಗದಲ್ಲಿ ತಿಪಟೂರಿನ 31 ವಾರ್ಡ್‍ಗಳಲ್ಲಿ ಮಾರ್ಚ್ 24 ರಿಂದ ಏಪ್ರೀಲ್ 13 ರವರೆಗೆ 21 ದಿನಗಳ ಕಾಲ ತಿಪಟೂರು ಲೈಫ್ ಸ್ಟಾರ್ ರಿಯೋಲಿಟಿ ಶೋ ಕಾರ್ಯಕ್ರಮವನ್ನು ನೆಡೆಸಲಾಗುವುದು ಎಂದು ಜಾಗೃತಿ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ರೇಣುಕಾರಾಧ್ಯ ತಿಳಿಸಿದರು.

       ನಗರದ ರೇಣುಕಾರಾಧ್ಯರವರ ಸ್ವರ್ಗಹದಲ್ಲಿ ಏರ್ಪಡಿಸಿದ್ದ ಪತ್ರಿಕಾಘೋಷ್ಠಿಯಲ್ಲಿ ತಿಳಿಸಿದ ಅವು ಈ ರಿಯೋಲಿಟಿ ಶೋ ಕಾರ್ಯಕ್ರಮದಲ್ಲಿ ಕಣ್ಣಿನ ಆರೋಗ್ಯ ಶಿಬಿರ, ಚುನಾವಣಾ ಅರಿವು ಕಾರ್ಯಕ್ರಮ, ಹಸಿರು ತಿಪಟೂರು, ಸ್ವಚ್ಛ ತಿಪಟೂರು, ಮಹಿಳಾ ಸಬಲೀಕರಣ, ಯೋಗ ಶಿಬಿರ, ಅಡುಗೆ ಸ್ವರ್ಧೆ, ಬುದ್ದಿ ಕೌಶಲ್ಯ ಆಟಗಳು, ಜೀವನೋಪಾಯ ಕಾರ್ಯಕ್ರಮಗಳು, ಸೇರಿದಂತೆ 21 ಸ್ವರ್ಧಾ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ, ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು  ವೈಬ್‍ಸೈಟ್‍ನಲ್ಲಿ ನೊಂದಣಿ ಮಾಡಿಕೊಳ್ಳಬಹುದು ಹೆಚ್ಚಿನ ಮಾಹಿತಿಗಾಗಿ 8217324046, 9483269324 ಸಂಪರ್ಕಿಸಬಹುದು.

         ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕೆಲವು ಸಂಘಸಂಸ್ಥೆಗಳು ಪ್ರಾಯೋಜಕತ್ವವನ್ನು ವಹಿಸುತ್ತಿದ್ದು, ಪ್ರಥಮ, ದ್ವಿತೀಯ, ತೃತೀಯ ಬಹುಮಾನವಿದ್ದು ಸ್ವರ್ಧೆಯಲ್ಲಿ ಭಾಗವಹಿಸು ಎಲ್ಲರಿಗೂ ಸಮಾದಾನಕರ ಬಹುಮಾನವನ್ನು ನೀಡಲಾಗುವುದು ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ತಿಪಟೂರು ಲೈಫ್ ಸ್ಟಾರ್ ಸಂಸ್ಥೆಯ ಕಾರ್ಯದರ್ಶಿ ಹರೀಶ್, ನಾಗೇಂದ್ರಕುಮಾರ್, ನಟರಾಜು, ಆನಂದ್ ಮೆಡಿಕಲ್ಸ್‍ನ ಸಿದ್ದಲಿಂಗಮೂರ್ತಿ ಹಾಜರಿದ್ದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

LEAVE A REPLY

Please enter your comment!
Please enter your name here