ಹುಳಿಯಾರು
ಹುಳಿಯಾರು ಕೆರೆಯಲ್ಲಿ ಅಕ್ರಮವಾಗಿ ಮರಳು ತುಂಬಿದ್ದ ಟ್ರಾಕ್ಟರ್ ಅನ್ನು ವಳಗೆರೆಹಳ್ಳಿ ಗ್ರಾಮಸ್ಥರ ಸಹಾಯದಿಂದ ಇಲ್ಲಿನ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೆರೆಗೆ ಹೊಂದಿಕೊಂಡಿರುವ ವಳಗೆರೆಹಳ್ಳಿ ಸಮೀಪ ಅಕ್ರಮವಾಗಿ ಮರಳು ಸಾಗಾಣಿಕೆ ನಡೆಯುತ್ತಲೇ ಇದೆ. ಈ ಬಗ್ಗೆ ಸಾರ್ವಜನಿಕರಿಂದ ಬಹುದಿನಗಳಿಂದಲೂ ವಿರೋಧ ವ್ಯಕ್ತವಾಗುತ್ತಿತ್ತು. ಈಗಾಗಲೇ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಅಲ್ಲದೆ ಇತ್ತೀಚೆಗೆ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್‍ಪಿ ಹುಳಿಯಾರಿಗೆ ಬಂದಿದ್ದ ವೇಳೆ ಕೆಲವರು ದೂರು ಸಹ ನೀಡಿದ್ದರು. ಆದರೆ, ಮರಳು ಗಣಿಗಾರಿಕೆಗೆ ಮಾತ್ರ ಕಡಿವಾಣ ಬಿದ್ದಿರಲಿಲ್ಲ. ಪರಿಣಾಮ ಅಕ್ರಮವಾಗಿ ಮರಳು ತುಂಬುವ ಕಾರ್ಯ ಇಲ್ಲಿ ಎಗ್ಗಿಲ್ಲದೆ ನಡೆಯುತ್ತಿತ್ತು.
ಇದನ್ನು ಗಮನಿಸಿದ ವಳಗೆರೆಹಳ್ಳಿ ಗ್ರಾಮಸ್ಥರು ಚಿಕ್ಕನಾಯಕನಹಳ್ಳಿ ಸಿಪಿಐಗೆ ದೂರವಾಣಿ ಮೂಲಕ ದೂರು ನೀಡಿದ್ದರು. ಅವರ ಮಾರ್ಗದರ್ಶನದಲ್ಲಿ ಹುಳಿಯಾರು ಪೊಲೀಸರು ಟ್ರಾಕ್ಟರ್ ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
