ಹುಳಿಯಾರು
ಲೋಕಸಭಾ ಚುನಾವಣೆ ಯಲ್ಲಿ ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಚುನಾವಣೆಯನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸಬೇಕು ಎಂದು ಹುಳಿಯಾರು ಪಪಂ ಮುಖ್ಯಾಧಿಕಾರಿ ಭೂತಪ್ಪ ತಿಳಿಸಿದರು.ಹುಳಿಯಾರು ಪಟ್ಟಣ ಪಂಚಾಯ್ತಿಯಿಂದ ಹಮ್ಮಿಕೊಂಡಿದ್ದ ಕಡ್ಡಾಯ ಮತದಾನದ ಜಾಗೃತಿ’ ಕಾರ್ಯಕ್ರಮದಲ್ಲಿ ಅವರು ಪೌರಕಾರ್ಮಿಕರು ಸೇರಿದಂತೆ ಸಿಬ್ಬಂಧಿ ವರ್ಗದವರಿಗೆ ಮತದಾನ ಬಗ್ಗೆ ಅರಿವು ಮೂಡಿಸಿ ಮಾತನಾಡಿದರು.
ಮತದಾನವು ಗೌಪ್ಯತೆಯನ್ನು ಕಾಪಾಡುವದು ಅತಿ ಮುಖ್ಯ. ಮತ್ತು ಕಡ್ಡಾಯವಾಗಿದೆ ಯಾರು ಯಾರಿಗೆ ಮತ ಹಾಕಿರಿವಿರಿ ಎಂದು ಪ್ರದರ್ಶಿಸುವ ಅಗತ್ಯವಿಲ್ಲ. ಹಾಗು ಯಾರಿಗೂ ಈ ವಿಷಯ ಹೇಳುವ ಅಗತ್ಯವಿಲ್ಲ. ಚುನಾವಣಾ ಸಿಬ್ಬಂದಿ ಯಾರಿಗೆ ಮತ ನೀಡಿರುವಿರಿ ಎಂದು ಕೇಳಿದರೂ ಹೇಳುವ ಅಗತ್ಯವಿಲ್ಲ ಹಾಗು ಇದು ಅಪರಾಧವೆ ಆಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮತ ಎಂದರೆ ಬರೀ ಒತ್ತುವುದಲ್ಲ. ದೇಶದ ಪ್ರಗತಿಯನ್ನು ಮೇಲೆತ್ತುವುದು. ಬಳಸಿರಿ ಮತ ಎಂಬ ಅಸ್ತ್ರವ, ಉಳಿಸಿರಿ ಪ್ರಜಾಪ್ರಭುತ್ವವ. ರೈತ ದೇಶದ ಬೆನ್ನೆಲುಬು, ಮತದಾರ ಪ್ರಜಾಪ್ರಭುತ್ವದ ಬೆನ್ನೆಲುಬು ಮತದಾರ. ಈ ದೇಶದ ಸೂತ್ರಧಾರ ಎಂಬ ವಿವಿಧ ಘೋಷಣೆಗಳೊಂದಿಗೆ ಪ್ರತಿಜ್ಞಾವಿಧಿ ಭೋಧಿಸಲಾಯಿತು.
ಈ ಸಂದರ್ಭದಲ್ಲಿ ಪಪಂ ಆರ್‍ಓ ಪ್ರದೀಪ್, ಬಿಲ್ ಕಲೆಕ್ಟರ್ ವೆಂಕಟೇಶ್, ಕೃಷ್ಣಮೂರ್ತಿ, ಗುಮಾಸ್ತರಾದ ಆನಂದ್, ಕಂಪ್ಯೂಟರ್ ಆಪರೇಟರ್ ರೇಖಾ, ಮುಸ್ಲಿಂ ಯುವಕ ಸಂಘದ ಇಮ್ರಾಜ್ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
