ಬೆಂಗಳೂರು
ಪೊಲೀಸ್,ಆಗ್ನಿಶಾಮಕ ಹಾಗೂ ಆ್ಯಂಬುಲೆನ್ಸ್ ಸೇವೆಗೆ ಒಂದೇ ಸಹಾಯವಾಣಿಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ.
ಪೊಲೀಸ್ ಅಗ್ನಿಶಾಮಕ ದಳ ಮತ್ತು ಆಂಬ್ಯುಲೆನ್ಸ್‍ನ ತುರ್ತು ಸೇವೆಗಳಿಗೆ ತಕ್ಷಣ ಸ್ಪಂದನೆ ದೊರೆಯುವಂತೆ ಒಂದೇ ಸಹಾಯವಾಣಿಯನ್ನು (ಇಆರ್‍ಎಸ್‍ಎಸ್)ಯ 112ರ ಸಂಖ್ಯೆಗೆ ತರಲಿದೆ.ಪ್ರತ್ಯೇಕ ಸಹಾಯವಾಣಿಯಿಂದ ಉಂಟಾಗುವ ಸಮಸೈಗೆ ಪರಿಹಾರ ಕಂಡುಕೊಳ್ಳಲು ಎಲ್ಲವನ್ನೂ ಒಟ್ಟು ಗೋಡಿಸಿ ಒಂದೇ ಸಹಾಯವಾಣಿ ಜಾರಿಯಾಗಲಿದೆ.
ಒಂದೇ ಸಹಾಯವಾಣಿಯಲ್ಲಿ ದೊರೆಯುವ ಈ ವ್ಯವಸ್ಥೆ ಈಗಾಗಲೇ 18 ರಾಜ್ಯಗಳಲ್ಲಿದೆ. ಕಳೆದ ನವೆಂಬರ್‍ನಲ್ಲಿ ಈ ವ್ಯವಸ್ಥೆಯನ್ನು ಹಿಮಾಚಲ ಪ್ರದೇಶ ಮೊದಲು ಜಾರಿಗೆ ತಂದಿತು.ಹೊರಹೋಗುವ ಕರೆಗಳು ರದ್ದಾಗಿರುವ ಅಥವಾ ತಾತ್ಕಾಲಿಕವಾಗಿ ಅಮಾನತು ಗೊಳಿಸಲಾಗಿರುವ ಫೋನ್‍ಗಳಿಂದಲೂ 112ಕ್ಕೆ ಉಚಿತವಾಗಿ ಕರೆ ಮಾಡಬಹುದಾಗಿದೆ.
ಒಂದೇ ಸಹಾಯವಾಣಿ ಜಾರಿಯ ಶೇ. 90 ರಷ್ಟು ಕೆಲಸ ಮುಗಿದಿದ್ದು, ಜುಲೈ 1 ರಿಂದ ಅಥವಾ 2ನೇ ವಾರದಿಂದ ಪ್ರಯೋಗಾತ್ಮಕವಾಗಿ ಈ ವ್ಯವಸ್ಥೆಯನ್ನು ಆರಂಭಿಸಲಾಗುತ್ತಿದೆ. ಅಂದರೆ, ಈಗಿರುವ 100, 101 ಮತ್ತು 109 ಸಂಖ್ಯೆಗಳ ಸೇವೆಯನ್ನು 112ರಲ್ಲಿ ಪಡೆಯಬಹುದು.
ಒಂದೇ ಸಹಾಯವಾಣಿ ಅನುಷ್ಠಾನದ ಹೊಣೆಯನ್ನು ಹೊತ್ತಿರುವ ಹೆಚ್ಚುವರಿ ಪೆÇಲೀಸ್ ಮಹಾನಿರ್ದೇಶಕಿ (ಸಂಪರ್ಕ ಮತ್ತು ಆಧುನೀಕರಣ) ಮಾಲಿನಿ ಕೃಷ್ಣಮೂರ್ತಿ ಇಆರ್‍ಎಸ್‍ಎಸ್ ನಂತರ, ಈ ಬಗ್ಗೆ ಸಾರ್ವಜನಿಕರ ಅರಿವನ್ನು ಆಧರಿಸಿ ಇತರೆ ಸಹಾಯವಾಣಿ ಸಂಖ್ಯೆಗಳನ್ನು ಹಂತಹಂತವಾಗಿ ಪ್ರಕಟಿಸಲಾಗುವುದು. ಹೊಸ ಸಹಾಯವಾಣಿಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ.
ದಿನದ 24 ಗಂಟೆಗಳ ಕಾಲ 112 ಕಾರ್ಯನಿರ್ವಹಿಸಲಿದ್ದು ಇದರ ಮೂಲಕ ವಾಯ್ಸ್ ಕಾಲ್, ಇ – ಮೇಲ್, ಇಂಟರ್ ನೆಟ್ ಹಾಗೂ ಬಸ್‍ಗಳಲ್ಲಿರುವ ಪ್ಯಾನಿಕ್ ಬಟನ್‍ಗಳ ಮೂಲಕವೂ ಸಂದೇಶ ಕಳಿಸಬಹುದಾಗಿದೆ.112ಕ್ಕೆ ಮಾಡುತ್ತಿದ್ದಂತೆಯೇ ಕರೆ ಎಲ್ಲಿಂದ ಬರುತ್ತಿದೆ ಎಂಬುದನ್ನು ಪತ್ತೆಹಚ್ಚಿ ಕೂಡಲೇ ಅಲ್ಲಿಗೆ ನೆರವನ್ನು ಕಳಿಸಲಾಗುತ್ತದೆ.
ಕೆನಡಾ ಮತ್ತು ಅಮೆರಿಕದಂತಹ ಮುಂದುವರೆದ ದೇಶಗಳಲ್ಲಿ 94 ಮತ್ತು ಇಂಗ್ಲೆಂಡ್‍ನಲ್ಲಿ 999 ಮತ್ತು ನ್ಯೂಜಿಲೆಂಡ್‍ನಲ್ಲಿ 111, ಆಸ್ಟ್ರೇಲಿಯಾದಲ್ಲಿ ಈಗಾಗಲೇ ಸೇವೆಯಲ್ಲಿವೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








