ಎಂ ಎನ್ ಕೋಟೆ :
ರಾಜ್ಯದ ಲೋಕಸಭಾ ಚುನವಣೆ ಸಮರ ಆರಂಭವಾಗಿದ್ದು ನೀತಿ ಸಂಹಿತೆ ಜಾರಿಗೆ ಬಂದ ಹಿನ್ನಲೆಯಲ್ಲಿ ರಾಜಕೀಯ ಇರುವ ಭಾವಚಿತ್ರ ಹಾಗು ಫೇಕ್ಸ್ ಬ್ಯಾನರ್ ಗಳನ್ನು ತೆಗೆದು ಹಾಕುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.
ಗುಬ್ಬಿ ತಾಲ್ಲೂಕಿನ ಎಂ ಎನ್ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮಲಾಪುರ , ಎಂ ಎನ್ ಕೋಟೆ , ಇಡಕನಹಳ್ಳಿ , ಉದ್ದೇಹೊಸಕೆರೆ , ಮಣಿಪುರ , ಹೊಸಹಳ್ಳಿ ಗ್ರಾಮಗಳಲ್ಲಿ ಇರುವ ಬ್ಯಾನರ್ ಗಳನ್ನು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಪ್ಲೇಕ್ಸ್ ಗಳನ್ನು ತೆರವು ಗೊಳಿಸಿದರು. ಸಾರ್ವಜನಿಕರ ಸ್ಥಳದಲ್ಲಿ ಇರುವ ಬ್ಯಾನರ ಗಳನ್ನು ತೆರವುಗೊಳಿಸಿದ್ದಾರೆ. ಇನ್ನೂ ಸಾಕಷ್ವು ಗ್ರಾಮಗಳಿಗೆ ಶುದ್ದ ಕುಡಿಯುವ ನೀರಿನ ಘಟಕಗಳ ಮೇಲೆ ಹಾಕಿದ್ದ ಸಂಸದರು ಹಾಗೂ ಶಾಸಕರ ಭಾವಚಿತ್ರಗಳ ಮೇಲೆ ಕೆಲವು ಬಿಳಿಯ ಕಾಗದ ಅಂಟಿಸುವ ಕೆಲಸ ಪ್ರಾರಂಭವಾಗಿದೆ.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ ವಿ ಶಿವಕುಮಾರ್ , ಉಪಾಧ್ಯಕ್ಷೆ ಹೆಚ್ ಪಿ ಸುಧಾಮಣಿ , ಪಿಡಿಓ ನಾಗೇಂದ್ರ , ಹಾಗೂ ಸಿಬ್ಬಂದಿಗಳಾದ ಬಸವರಾಜು , ಸಿದ್ದಲಿಂಗಯ್ಯ , ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
