ಕೊರಟಗೆರೆ
ಪ್ರಸಕ್ತ ಸನ್ನಿವೇಶದಲ್ಲಿಉತ್ತಮ ಪಲಿತಾಂಶ ಬರಬೇಕಾದರೆ ಶಿಕ್ಷಕರು ವಿದ್ಯಾರ್ಥಿಗಳ ಬುದ್ದಿ ಮಟ್ಟವನ್ನುಅರಿತು ಅವರ ಶೈಲಿಯಲ್ಲಿಯೇ ವಿದ್ಯಾಬ್ಯಾಸ ಮಾಡಿದಾಗ ಮಾತ್ರಗುರಿ ಮುಟ್ಟಲು ಸಾದ್ಯಎಂದು ಮಧುಗಿರಿ ಶೈಕ್ಷಣಿಕ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರವಿಶಂಕರ್‍ರೆಡ್ಡಿ ತಿಳಿಸಿದರು.
ಅವರು ತಾಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ರೆಡ್ಡಿಕಟ್ಟೆ ಮುರಾರ್ಜಿ ವಸತಿ ಶಾಲೆಯಲ್ಲಿ ಸಾರ್ವಜನಿಕರ ಶಿಕ್ಷಣ ಇಲಾಖೆ ಮತ್ತು ಮುಖ್ಯೋಪಾದ್ಯಾಯರ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ 2018-19ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಕುರಿತುಒಂದು ದಿನದಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳ ಬುದ್ದಿಮಟ್ಟವನ್ನುಅರಿತು ಶಿಕ್ಷಕರು ಶಿಕ್ಷಣ ಬೋದಿಸಿದಾಗ ಮಾತ್ರಉತ್ತಮ ಫಲಿತಾಂಶ ಬರಲು ಸಾದ್ಯಇಲ್ಲವಾದರೆಇಡೀ ಶಿಕ್ಷಣ ವ್ಯವಸ್ಥೆ ಬುಡುಮೇಲಾಗಲಿದೆಎಂದುಅಭಿಪ್ರಾಯ ಪಟ್ಟರು.
ಶೈಕ್ಷಣಿಕವಾಗಿ ಮಕ್ಕಳ ಸಾಧನೆಗೆ ಶಾಲೆಗಳು ವೇದಿಕೆಯಾಗ ಬೇಕು ಇದಕ್ಕೆ ಶಿಕ್ಷಕರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು, ಸ್ವತಃ ಶಿಕ್ಷಕರು ಸದಾ ಅಧ್ಯಯನಶೀಲರಾಗಬೇಕು, ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ಮಕ್ಕಳಿಗೆ ಸಾದನೆ ಮಾಡಲು ಸಹಕಾರಿಯಾಗುತ್ತದೆ, ಪ್ರತಿ ವರ್ಷ ತಾಲೂಕಿನಲ್ಲಿ ಉತ್ತಮ ಫಲಿತಾಂಶ ದಾಖಲಾಗುತ್ತಿದ್ದು ಮುಂದೇಯು ಇದೇ ರೀತಿ ಸಾಧನೆ ಮಾಡಬೇಕು ಎಂದರು.
ಶಿಕ್ಷಣಾದಿಕಾರಿ ಟಿ.ಎಂ.ಕುಮಾರ್ ಮಾತನಾಡಿ ಪರೀಕ್ಷೆ ಕೆಲವೇ ದಿನಗಳು ಬಾಕಿ ಇದ್ದು ಮುಖ್ಯಶಿಕ್ಷಕರು ಜವಾಬ್ದಾರಿ ವಹಿಸಿ ಶಿಕ್ಷಣದಲ್ಲಿ ಹಿಂದುಳಿದಿರುವ ಮಕ್ಕಳನ್ನು ಗುರುತಿಸಿಸ ಶಾಲಾ ಹಂತದಲ್ಲಿ ಕಠಿಣ ವಿಷಯಗಳ ಬಗ್ಗೆ ಪರೀಕ್ಷೆ ಬರೆಸಿ ಮೌಲ್ಯಮಾಪನ ಮಾಡಿ ಮಕ್ಕಳು ಪಡೆದ ಅಂಕಗಳ ಬಗ್ಗೆ ಅರಿತು ಅವರಿಗೆ ಮಾರ್ಗದರ್ಶನ ನೀಡಿ ಇದರೊಂದಿಗೆ ಪೋಷಕರ ಸಬೆ ಕರೆದು ಚರ್ಚೆ ನಡೆಸಿ ಮನೆ ಬೇಟಿ ಕಾರ್ಯಕ್ರಮ ಮಾಡಿ , ರಸಪ್ರಶ್ನೆ ಹಾಗೂ ಸಂವಾದ ಕಾರ್ಯಕ್ರಮ ಮಾಡಿ, ತರಗತಿ ಮುಗಿದ ನಂತರ ತೆರೆದ ಪುಸ್ತಕ ಪರೀಕ್ಷೆ ಮಾಡಿ ಉತ್ತಮ ಫಲಿತಾಂಶಕ್ಕೆ ಕಠಿಣ ವಿಷಯಗಳ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡಿ ತಾಲೂಕಿನಲ್ಲಿ ಉತ್ತಮ ಫಲಿತಾಂಶ ಬರುವಂತೆ ಶ್ರಮಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ್ ಮಾತನಾಡಿ ಕೊರಟಗೆರೆ ತಾಲೂಕು ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶದಲ್ಲಿ ಪ್ರಥಮ ಸ್ಥಾನದಲ್ಲಿದ್ದು ಈ ಬಾರಿಯೂ ಶಿಕ್ಷಕರು ಶ್ರಮವಹಿಸಿ ಪ್ರಥಮ ಸ್ಥಾನವನ್ನು ಉಳಿಸಿಕೊಳ್ಳುವುದರೊಂದಿಗೆ ಶೇಡವಾರು ಫಲಿತಾಂಶ ಹೆಚ್ಚಿಸಿಕೊಳ್ಳಬೇಕು ಇದರ ಪೂರಕವಾಗಿ 8 ಮತ್ತು 9ನೇ ತರಗತಿ ಮಕ್ಕಳಿಗೂ ಭೋದನೆಯಲ್ಲಿ ಹೆಚ್ಚು ಗಮನ ಹರಿಸಬೇಕುಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣಾದಿಕಾರಿಗಳಾದ ರಾಜಕುಮಾರ್, ಅಶ್ವತ್ಥನಾರಾಯಣ್, ಕ್ಷೇತ್ರ ಸಂಪನ್ಮೂಲಾದಿಕಾರಿ ಸುರೇಂದ್ರನಾಥ್, ಮೋಹನ್‍ಕುಮಾರ್, ಪಾಂಡುರಂಗ, ವೈ.ಸಿ.ವಿಸ್ವಾಮಿ ಸೇರಿದಂತೆ ತಾಲೂಕಿನ ಎಲ್ಲಾ ಪ್ರೌಢಶಾಲಾ ಮುಖ್ಯಶಿಕ್ಷಕರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ