ಶುದ್ಧ ಕುಡಿಯುವ ನೀರನ್ನು ಒದಗಿಸುವ ಪ್ರಾಮಾಣಿಕ ಕೆಲಸ ಎಲ್ಲರದ್ದು

0
14

ಶಿರಾ

    ಅಶುದ್ಧವಾದ ನೀರನ್ನು ಸೇವಿಸುವುದು ರೋಗ ರುಜಿನಗಳಿಗೆ ಕಾರಣವಾಗುತ್ತಿದ್ದು, ಶುದ್ಧೀಕರಿಸಿದ ನೀರನ್ನು ಒದಗಿಸುವ ಮೂಲಕ ಶಿರಾ ಭಾಗದಂತಹ ಬರ ಪೀಡಿತ ಜನತೆಗೆ ಸ್ಪಂದಿಸುವಂತಹ ಪ್ರಾಮಾಣಿಕ ಕೆಲಸಗಳು ಆಗಬೇಕಿದೆ ಎಂದು ಡಾ.ರಾಜೇಶ್‍ಗೌಡ ತಿಳಿಸಿದರು.
ತಾಲ್ಲೂಕಿನ ತಾವರೆಕೆರೆ ಗ್ರಾಮದ ಶ್ರೀ ಸಿದ್ದಾರ್ಥ ಪ.ಪೂ. ಕಾಲೇಜಿನ ಆವರಣದಲ್ಲಿ ಗುರುವಾರ ಕೈಗೊಳ್ಳಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

       ಶಿರಾ ಭಾಗದಲ್ಲಿ ಮಳೆಯ ವೈಫಲ್ಯದಿಂದಾಗಿ ಅಂತರ್ಜಲ ಬತ್ತುತ್ತಿದೆ. ಶುದ್ಧವಾದ ಕುಡಿಯುವ ನೀರು ಲಭ್ಯವಾಗುತ್ತಿಲ್ಲ. ಯೋಗ್ಯವಲ್ಲದ ಕುಡಿಯುವ ನೀರಿನಿಂದ ಜನ ಸಾಮಾನ್ಯರು ರೋಗಗಳಿಗೆ ತುತ್ತಾಗುತ್ತಿದ್ದು, ಪ್ರತಿ ಹಳ್ಳಿಗಳಲ್ಲೂ ಶುದ್ಧ ಕುಡಿಯುವ ನೀರಿನ ಘಟಕಗಳ ಅವಶ್ಯಕತೆ ಇದೆ. ಶಾಲಾ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸಿದ್ಧಾರ್ಥ ಕಾಲೇಜಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಒದಗಿಸಲಾಗಿದೆ. ಮಕ್ಕಳು ತಮ್ಮ ಶೈಕ್ಷಣಿಕ ಬದುಕನ್ನು ಹಸನುಗೊಳಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು.

        ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ದೇವರಾಜು, ತಿಪ್ಪೇಸ್ವಾಮಿ ದೇವರಾಜ್‍ಗೌಡ, ನಾಗರಾಜಯ್ಯ, ಗೌರಮ್ಮ, ಮನೋಹರನಾಯ್ಕ, ನಾರಾಯಣರಾವ್, ಡಿ.ರಾಮಯ್ಯ ಮುಂತಾದವರು ಹಾಜರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here