ರೈತರಿಗೆ ಸಹಾಯಹಸ್ತದಿಂದ ಕೃಷಿ ಕ್ಷೇತ್ರ ಪ್ರಗತಿಯತ್ತ

 ಮಧುಗಿರಿ : 

      ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತನಿಗೆ ಸಹಾಯ ಹಸ್ತ ನೀಡುತ್ತಿರುವುದರಿಂದ ಕೃಷಿ ಕ್ಷೇತ್ರವು ಪ್ರಗತಿಯತ್ತ ಸಾಗುತ್ತಿದೆ ಎಂದು ರಾಜ್ಯ ರೈತ ಮೋರ್ಚ ಉಪಾಧ್ಯಕ ಎಂ.ಬಿ.ನಂದೀಶ್ ತಿಳಿಸಿದರು.

      ಪಟ್ಟಣದ 23 ನೇ ವಾರ್ಡಿನ ಶಿವರಾಂ ರವರ ತೋಟದಲ್ಲಿ ಆಯೋಜಿಸಿದ್ದ ರೈತ ಸಂವಾದ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರವರ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ಇಂದೂ ದೇಶದಲ್ಲಿನ ರೈತರ ಖಾತೆಗೆ 6000 ರೂಪಾಯಿಗಳು ನೇರವಾಗಿ ಜಮೆಯಾಗುತ್ತಿದೆ. ದೇಶವು ಸ್ವಾವಲಂಭನೆಯತ್ತ ಸಾಗುತ್ತಿದ್ದು ಈ ಮೊದಲು ನಮ್ಮ ಪಕ್ಷದಲ್ಲಿ ರೈತ ದಿನಾಚರಣೆಯನ್ನು ಸುಶಾಸನ ದಿನವೆಂದು ಮೊದಲಿನಿಂದಲೂ ಆಚರಿಸುತ್ತಾ ಬಂದಿದ್ದೇವೆ ಎಂದರು,
ಕೊರೊನಾ ಸಂಧರ್ಭದಲ್ಲಿ ಕೃಷಿ ಚಟುವಟಿಕೆ ಹೆಚ್ಚಾಗಿದೆ. ಅಟಲ್ ಬಿಹಾರಿ ವಾಜಪೇಯಿ ರವರು 24 ಪಕ್ಷಗಳೊಂದಿಗೆ ಎನ್.ಡಿ.ಎ ಪಕ್ಷ ಮೂಲಕ ಕೇಂದ್ರದಲ್ಲಿ ಯಶಸ್ಸಿನ ಆಡಳಿತ ನಡೆಸಿದರು. ದೇಶದಲ್ಲಿ ಗ್ರಾಮ ಸಡಕ್ ಯೋಜನೆಯ ಮೂಲಕ ರಾಜ್ಯ ಹೆದ್ದಾರಿ ಹಾಗೂ ಗ್ರಾಮಗಳ ರಸ್ತೆಗಳನ್ನು ಅಭಿವೃದ್ಧಿಯ ಪಡಿಸಿದರು.

      2014 ರಿಂದ ಮೋದಿಜೀ ಯವರ ಆಡಳಿತವನ್ನು ವಿದೇಶಗಳು ಸಹ ಮೆಚ್ಚಿಕೊಂಡಿವೆ. ಪ್ರಚಂಚದಲ್ಲಿಯೇ ಮೊಟ್ಟೆ, ಹೈನುಗಾರಿಕೆ, ಅಕ್ಕಿ, ಸಕ್ಕರೆ, ಬಟ್ಟೆ ಉತ್ಪಾದನೆಯಲ್ಲಿ ಹಾಗೂ ರಫ್ತು ಮಾಡುವುದರಲ್ಲಿ ಭಾರತ ನಂ.1 ಸ್ಥಾನ ಪಡೆದುಕೊಂಡಿದ್ದು ರಾಕೆಟ್ ತಂತ್ರಜ್ಞಾನ ದಲ್ಲೂ ಭಾರತ ಮುಂದುವರೆದಿದೆ. ಇಂದೂ ಬೇರೆ ದೇಶಗಳಿಗೂ ಸಾಲ ನೀಡುವಂತಹ ವಾತವರಣ ಸೃಷ್ಟಿಯಾಗಿದೆ ಎಂದರು.

ಮಂಡಳಾಧ್ಯಕ್ಷ ಪಿ.ಎಲ್.ನರಸಿಂಹಮೂರ್ತಿ ಮಾತನಾಡಿ ವಾಜಪೇಯಿಯವರು ಕರ್ನಾಟದ ಬಗ್ಗೆ ವಿಶೇಷವಾದಂತಹ ಕಾಳಜಿ ಹೊಂದಿದ್ದವರು. ಅವರು ಪ್ರಧಾನಿಗಳಾದ ನಂತರ ಇಡೀ ದೇಶ ಅಭಿವೃದ್ಧಿ ಯತ್ತಾ ಸಾಗಿತು. ಅವರ ಜನ್ಮಾ ದಿನಾಚರಣೆಯಲ್ಲಿ ತಾಲ್ಲೂಕಿನ ರೈತರನ್ನು ಸನ್ಮಾಸಿಸುತ್ತಿರುವುದು ಖುಷಿ ತಂದಿದೆ. ತಾಲ್ಲೂಕಿನಲ್ಲಿ 2 ನೇ ಹಂತದ ಗ್ರಾಪಂ ಚುನಾವಣೆ ನಡೆಯುತ್ತಿದ್ದು ಈ ಚುನಾವಣೆಯಲ್ಲಿ 10 ರಿಂದ 15 ಪಂಚಾಯತಿಗಳಲ್ಲಿ ನಮ್ಮ ಪಕ್ಷದ ಬೆಂಬಲಿತರು ಆಯ್ಕೆ ಯಾಗುವುದು ಬಹುತೇಕ ಖಚಿತವಾಗಿದ್ದು ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ ಎಂದರು.

      ಇದೇ ಸಂಧರ್ಭದಲ್ಲಿ ತಾಲ್ಲೂಕಿನ ಹೋಬಳಿಯ ರೈತರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಪಟ್ಟಣದ ಡೂಂ ಲೈಟ್ ವೃತ್ತಾದಲ್ಲಿ ಮಾಜಿ ಪ್ರಧಾನಿ ವಾಜಪೇಯಿಯವರ ಜನ್ಮಾ ದಿನಾಚರಣೆಯನ್ನು 96 ಕೆ.ಜಿ.ತೂಕದ ಕೇಕ್ ನ್ನು ಕತ್ತರಿಸುವ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು.

      ಮುಖಂಡರಾದ ದಾವಣಗೆರೆ ಪ್ರಭಾರಿ ಲಕ್ಷ್ಮೀಶ, ರಾಮಚಂದ್ರಪ್ಪ, ಬಿ.ಪಿ.ನಾರಾಯಣ್, ಸೀತರಾಂ, ಸುರೇಶ್, ಕಲ್ಪನಾ ಗೋವಿಂದರಾಜು, ಲಕ್ಷ್ಮೀ ಪ್ರಕಾಶ್, ಕಾರ್ತಿಕ್, ಭಾಗ್ಯಪ್ರಸಾದ್ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link