ನವದೆಹಲಿ: 

ಲೋಕಸಭಾ ಚುನಾವಣೆಯ 4ನೇ ಹಂತದ ಮತದಾನ ನಡೆಯುತ್ತಿದ್ದು ಮಧ್ಯಾಹ್ನ 01 ಗಂಟೆ ವೇಳೆಗೆ ಶೇ.38.60ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
4ನೇ ಹಂತದಲ್ಲಿ 9 ರಾಜ್ಯಗಳ ಒಟ್ಟು 72 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಮಧ್ಯ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಒಡಿಶಾ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಹಲವು ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
ಮಧ್ಯಾಹ್ನ 01ಗಂಟೆ ವೇಳೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ.6.66 ರಷ್ಟು, ಜಾರ್ಖಂಡ್ ನಲ್ಲಿ ಶೇ. 44.90 ರಷ್ಟು, ಮಧ್ಯ ಪ್ರದೇಶದಲ್ಲಿ ಶೇ.43.44ರಷ್ಟು, ಮಹಾರಾಷ್ಟ್ರದಲ್ಲಿ ಶೇ. 29.86ರಷ್ಟು, ಬಿಹಾರದಲ್ಲಿ ಶೇ.37.71ರಷ್ಟು, ಒಡಿಶಾದಲ್ಲಿ ಶೇ. 35.79ರಷ್ಟು, ರಾಜಸ್ಥಾನದಲ್ಲಿ ಶೇ. 44.56ರಷ್ಟು, ಉತ್ತರ ಪ್ರದೇಶದಲ್ಲಿ ಶೇ.34.42ರಷ್ಟು ಮತ್ತು ಪಶ್ಚಿಮ ಬಂಗಾಳದಲ್ಲಿ ಶೇ. 52.37ರಷ್ಟು ಮತದಾನವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
