ಚೆನ್ನೈ:
ನಮ್ಮ ದೇಶದಲ್ಲಿ ದೇವರಿಗೆ ಪೂಜೆ ಮಾಡುವುದು ಪುಣ್ಯದ ಕೆಲಸ ಅದರಲ್ಲೂ ಅರ್ಚಕರೆಂದರೆ ಸದಾದೈವಸ್ಮರಣೆಯಲ್ಲೆ ಇರುವವರು ಎಂಬುದು ಪ್ರತೀತಿ ಆದರೆ ಗ್ರಹಚಾರ ಕೆಟ್ಟರೆ ಯಾರನ್ನು ದೇವರು ಕಾಪಾಡಲು ಸಾಧ್ಯವಿಲ್ಲ ೆಂಬುದು ಮತ್ತೆ ಋಜುವಾತಾಗಿದೆ ಚೆನ್ನೈನಲ್ಲಿರುವ 18 ಅಡಿ ಆಂಜನೇಯನಿಗೆ ಪೂಜೆ ಮಾಡುವ ವೇಳೆಯಲ್ಲಿ ವೇಳೆ 11 ಅಡಿ ಎತ್ತರದಿಂದ ಅರ್ಚಕರೊಬ್ಬರು ಬಿದ್ದು ಸಾವನ್ನಪ್ಪಿರುವ ದುರ್ಘಟನೆ ತಮಿಳುನಾಡಿನಲ್ಲಿ ನಾಮಕ್ಕಲ್ ದೇಗುಲದಲ್ಲಿ ನಡೆದಿರುವುದು ತಿಳಿದು ಬಂದಿದೆ.
ನಾಮಕ್ಕಲ್‍ನಲ್ಲಿ 18 ಅಡಿ ಎತ್ತರದ ಆಂಜನೇಯನ ವಿಗ್ರಹವಿರುವ ದೇಗುಲವಿದೆ. ಅಲ್ಲಿ ದೇವರ ಪೂಜೆ ವೇಳೆ ಮಾಲಾರ್ಪಣೆ ಮಾಡುವಾಗ ಏಣಿಯಿಂದ ಬಿದ್ದು ಅರ್ಚಕರಾದ ವೆಂಕಟೇಶ್(53) ಸಾವನ್ನಪ್ಪಿದ್ದಾರೆ. ಭಾನುವಾರ ದೇವಾಲಯದಲ್ಲಿ ಆಂಜನೇಯ ಸ್ವಾಮಿಗೆ ಭಕ್ತರೊಬ್ಬರು ವಿಶೇಷ ಹಾರವನ್ನು ನೀಡಿದ್ದರು. ಈ ವೇಳೆ ಕಬ್ಬಿಣದ ಮೆಟ್ಟಿಲ ಮೇಲೆ ನಿಂತು ದೇವರಿಗೆ ಹಾರ ಹಾಕಲು ಮುಂದಾಗುತ್ತಿದ್ದಾಗ ಕಾಲು ಜಾರಿ 11 ಅಡಿ ಎತ್ತರದಿಂದ ಅರ್ಚಕರು ಕೆಳಗೆ ಬಿದ್ದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
