ಪೆರಿಯಾರ್ ಪ್ರಕರಣ : ಮಾ.7ಕ್ಕೆ ತಲೈವಾ ವಿಚಾರಣೆ…!

ತಮಿಳು ನಾಡು:

     ದಕ್ಷಿಣದ ಸೂಪರ್ ಸ್ಟಾರ್  ಎಂದೇ ಖ್ಯಾತರಾದ ರಜನಿಕಾಂತ್ ಗೆ ಮತ್ತೆ ಸಂಕಷ್ಟ ಎದುರಾಗಿದೆ. ಸಮಾಜ ಸುಧಾರಕ ಪೆರಿಯಾರ್ ರಾಮಸ್ವಾಮಿ ಕುರಿತು ನೀಡಿದ್ದ ಹೇಳಿಕೆ ತಮಿಳುನಾಡಿನಲ್ಲಿ ಭಾರಿ ವಿವಾದಕ್ಕೆ ಗುರಿಯಾಗಿತ್ತು.

    ತಲೈವಾ ಹೇಳಿಕೆ ಖಂಡಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಕೂಡಲೇ ರಜನಿಕಾಂತ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದವು. ರಜನಿಕಾಂತ್ ಹೇಳಿಕೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಇದೀಗ, ರಜನಿಕಾಂತ್ ಗೆ ಮತ್ತೆ ಸಂಕಷ್ಟ ಎದುರಾಗಿದೆ. ಪೆರಿಯಾರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ರಜನಿಕಾಂತ್ ಮೇಲೆ ಪೊಲೀಸ್ ಕ್ರಮ ಜರುಗಿಸುವಂತೆ ಡಿವಿಕೆ ಪಕ್ಷ ನ್ಯಾಯಾಲಯದ ಮೊರೆ ಹೋಗಿದೆ.  

     ತಮಿಳು ನಟ ಹಾಗೂ ರಾಜಕಾರಣಿ ರಜನಿಕಾಂತ್ ವಿರುದ್ಧ ಕ್ರಮ ಜರುಗಿಸುವಂತೆ ದ್ರಾವಿಡರ್ ವಿದುದಲೈ ಕಚ್ಚಿ (ಡಿವಿಕೆ) ಪ್ರಧಾನ ಕಾರ್ಯದರ್ಶಿ ಉಮಾಪತಿ ಅವರು ಚೆನ್ನೈ ಮಹಾನಗರ ಮ್ಯಾಜಿಸ್ಟ್ರೇಟ್ ನಲ್ಲಿ ದೂರು ನೀಡಿದ್ದಾರೆ. ದ್ರಾವಿಡ ಚಳವಳಿ ಪಿತಾಮಹ ಎಂದೇ ಕರೆಯಲಾಗುವ ಪೆರಿಯಾರ್ ಅವರ ವರ್ಚಿಸ್ಸಿಗೆ ರಜನಿಕಾಂತ್ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ. ಉಮಾಪತಿ ಅವರ ಅರ್ಜಿ ಸ್ವೀಕರಿಸಿರುವ ಕೋರ್ಟ್ ಮಾರ್ಚ್ 7 ರಂದು ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ