ಫೇಸ್‍ಬುಕ್ ಬದುಕು : ಒಳಗೆ ಮತ್ತು ಹೊರಗೆ

0
72

 

ಸಂಬಂಧಿತ ಚಿತ್ರ

    ‘ಮಾರ್ನಿಂಗ್ ಸೆಲ್ಫಿ ವಿತ್ ಹಾಟ್‍ಕಾಫಿ’ ಎಂಬ ಶೀರ್ಷಿಕೆಯೊಂದಿಗೆ ಕಾಫಿ ಕಫ್ ಹಿಡಿದುಕೊಂಡ ಯುವತಿಯೋರ್ವಳ ಫೋಟೋ ಫೇಸ್‍ಬುಕ್‍ನಲ್ಲಿ ಹರಿದಾಡುತ್ತಿತ್ತು. ಅದಕ್ಕೆ ಕಾಮೆಂಟ್‍ಗಳು ಮತ್ತು ಲೈಕ್‍ಗಳು ಲೆಕ್ಕವಿಲ್ಲದಷ್ಟು. ಕಾಮೆಂಟ್‍ಗಳಂತೂ ಬಗೆ ಬಗೆಯವು. ಇದನ್ನು ನೋಡುತ್ತಿದ್ದಾಗ ಅನಿಸಿದ್ದು ಫೇಸ್‍ಬುಕ್ ಮಾಯೆಯೋ ಅಥವಾ ಮಾಯೆಯೊಳಗೆ ಫೇಸ್‍ಬುಕ್‍ ತುಂಬಿದೆಯೋ ಎಂಬ ಗೊಂದಲ. ಫೇಸ್‍ಬುಕ್ ಬದುಕಿನಲ್ಲಿ ಎರಡು ಬಗೆಯನ್ನು ಕಾಣಬಹುದು. ಒಂದು ಫೇಸ್‍ಬುಕ್‍ನ ಒಳಗೆ ಮತ್ತೊಂದು ಫೇಸ್‍ಬುಕ್‍ನ ಹೊರಗೆ.

ಫೇಸ್‍ಬುಕ್‍ನ ಒಳ ಬದುಕು:

ಸಂಬಂಧಿತ ಚಿತ್ರ

      ಫೇಸ್‍ಬುಕ್‍ಇಲ್ಲದೆ ಬದುಕೇಇಲ್ಲ; ಫೇಸ್‍ಬುಕ್‍ನೊಂದಿಗೆ ಬೆಳಗಿನ ಆರಂಭ ಮತ್ತುರಾತ್ರಿಎಂದು ಕಳೆಯುವ ಅದೆಷ್ಟೋ ಮಂದಿ ನಮ್ಮ ನಡುವೆಇದ್ದಾರೆ.ನಿಮಿಷಕ್ಕೊಂದು ಫೋಟೋಅಪ್‍ಲೋಡ್ ಮಾಡಿಅದಕ್ಕೆ ಬರುವ ಲೈಕ್, ಶೇರ್ ಮತ್ತು ಕಾಮೆಂಟ್‍ಗಳನ್ನು ನೋಡಿ ಖುಷಿಪಡುವ ಸಾಕಷ್ಟು ಮಂದಿ ಅದನ್ನೇತಮ್ಮ ಬದುಕಿನ ಬಹುಮುಖ್ಯ ಅಂಗ ಎಂದು ತೀರ್ಮಾನಿಸಿಕೊಂಡಿರುತ್ತಾರೆ.ಇಂತವರು ಫೇಸ್‍ಬುಕ್‍ನ ಒಳಗಿನ ಬದುಕಿನ ಸಮೂಹಕ್ಕೆ ಸೇರಿಕೊಳ್ಳುತ್ತಾರೆ.

      ಇಂತಹ ಸಮೂಹದವರ ಬಗ್ಗೆ ಬರೆಯುತ್ತಾ ಹೋದರೆಕೊನೆಯೇಇರುವುದಿಲ್ಲ. ಒಂದಾ..ಎರಡಾ…ಅದೆಷ್ಟೋ ಮಂದಿ ಫೇಸ್‍ಬುಕ್‍ನ ವ್ಯಸನಿಗಳಾಗಿದ್ದಾರೆ.ಬೆಳಿಗ್ಗೆ ಎದ್ದತಕ್ಷಣದೇವರ ಫೋಟೋ ನೋಡುತ್ತಾರೋಇಲ್ಲವೋ?ಮೊಬೈಲ್‍ನಲ್ಲಿನ ಫೇಸ್‍ಬುಕ್‍ನ್ನುತೆರೆದು ನೋಡುವುದರಿಂದಲೇ ಬೆಳಗಿನ ಆರಂಭವಾಗುತ್ತದೆ.ಫೇಸ್‍ಬುಕ್ ಲೈವ್‍ನಲ್ಲಿಯೇ ಬ್ರಷ್ ಮಾಡುವುದು, ತಿಂಡಿ, ಊಟ ನಡೆಯುತ್ತದೆ. ಸಂಜೆಯ ಹೊತ್ತಿಗೆಅವರುಅಪ್‍ಲೋಡ್ ಮಾಡಿದ ಫೋಟೋ/ವಿಷಯಗಳ ಸಂಖ್ಯೆ ಲೆಕ್ಕಕ್ಕೆ ನಿಲುಕದು. ರಾತ್ರಿ ಮಲಗುವಾಗಲೂ ಅದಕ್ಕೆಅಂಟಿಕೊಂಡೇಇರುತ್ತಾರೆ. ತಾವುಅಪ್‍ಲೋಡ್ ಮಾಡಿದ ಫೋಟೋಗಳಿಗೆ ಬರುವ ಲೈಕ್‍ಗಳು ಜಾಸ್ತಿಯಾಗಬೇಕೆಂಬ ತುಡಿತ. ಬರುವ ಕಾಮೆಂಟ್ಸ್‍ಗಳಿಗೆ ಉತ್ತರಿಸುತ್ತಾ, ಖುಷಿ ಪಡುವ ಮಂದಿಗೆ ಫೇಸ್‍ಬುಕ್‍ಜೀವನದ ಬಹು ಮುಖ್ಯಅಂಗವಾಗಿಬಿಟ್ಟಿದೆ.

ಫೇಸ್‍ಬುಕ್‍ನ ಹೊರ ಬದುಕು:

ಸಂಬಂಧಿತ ಚಿತ್ರ

      ಮತ್ತಷ್ಟು ಜನರಿದ್ದಾರೆ. ಫೇಸ್‍ಬುಕ್ ಎಂಬ ಸಾಮಾಜಿಕ ಜಾಲತಾಣದ ತಂಟೆಗೇ ಹೋಗುವುದಿಲ್ಲ. ಕಾರಣ ಕೇಳಿದರೆ ‘ಯಾಕೆ ಸಾರ್?ನಾವು ನೆಮ್ಮದಿಯಾಗಿ ಬದುಕುವುದು ನಿಮಗೆ ಇಷ್ಟವಿಲ್ವಾ?’ ಎಂಬ ಉತ್ತರ! ‘ಫೇಸ್‍ಬುಕ್ ಮನುಷ್ಯನ ಜೀವನದ ನೆಮ್ಮದಿಯನ್ನು ಹಾಳು ಮಾಡುತ್ತದೆ’ಎಂದು ಮುಂದುವರಿದ ಉತ್ತರ ಸಿಗುತ್ತದೆ.ಯಾಕೆ ಹೀಗೆ? ಎಂದು ಕೇಳಿದರೆ, ‘ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡುವ ಫೋಟೋಗಳು, ವಿಷಯಗಳು ನಿಜವೋ ಸುಳ್ಳೋ ಎಂಬ ಹುಡುಕಾಟ, ತೊಳಲಾಟ, ಕಿರಿಕಿರಿಯಿಂದ ಸಮಯ ವ್ಯರ್ಥಜೊತೆಗೆ ಮಾನಸಿಕ ನೆಮ್ಮದಿ ಇಲ್ಲವಾಗುತ್ತದೆ.ಇನ್ನು ನಾವೇನಾದರೂ ಫೋಟೋವೊಂದನ್ನುಅಪ್‍ಲೋಡ್ ಮಾಡಿದರೆ ಅದಕ್ಕೆ ಎಂತಹ ಕಾಮೆಂಟ್ ಬರುತ್ತದೆಯೋ? ಋಣಾತ್ಮಕವಾಗಿ ಏನಾದರೂ ಕಾಮೆಂಟ್ ಬಂದರೆ ಅದರಿಂದ ಮನಸಿಗೆ ನೋವು..’ಹೀಗೆ ಸಾಕಷ್ಟು ಅನುಭವಿಗಳಂತೆ ಕಾರಣ ಹೇಳುತ್ತಾರೆ. ಇವರು ಫೇಸ್‍ಬುಕ್ ಹೊರಗಿನ ಬದುಕನ್ನು ಆಯ್ಕೆ ಮಾಡಿಕೊಂಡವರಾಗುತ್ತಾರೆ.

      ಇಂತವರ ಸಮೂಹದಲ್ಲಿ ಮತ್ತೊಂದು ವರ್ಗದವರೂಇದ್ದಾರೆ.ಅವರುಈ ಫೇಸ್‍ಬುಕ್‍ನಂತಹ ಸಾಮಾಜಿಕ ಜಾಲತಾಣಗಳ ಗೊಡವೆಯೇ ನಮಗೆ ಬೇಡಎಂದು ಕೇವಲ ಬೇಸಿಕ್ ಮೊಬೈಲ್‍ಗಳನ್ನು ಬಳಸುತ್ತಿರುತ್ತಾರೆ.ಕಾರಣ ಪ್ರಸ್ತುತಎಲ್ಲೇ ನೋಡಿದರೂ ಬಗೆ ಬಗೆಯ ಸ್ಮಾರ್ಟ್‍ಫೋನ್‍ಗಳು ಜೊತೆಗೆಅಗ್ಗದಇಂಟರ್‍ನೆಟ್.ಅಂತಹ ಮೊಬೈಲ್‍ಇದ್ದರೆ ಈ ಸಾಮಾಜಿಕ ಜಾಲತಾಣಗಳ ಮೊರೆ ಹೋಗಬೇಕಾಗುತ್ತದೆಎಂದು ಅವುಗಳಿಂದ ದೂರಇರುವ ಸಲುವಾಗಿ ಬೇಸಿಕ್ ಮೊಬೈಲ್‍ಗಳನ್ನೇ ಬಳಸುತ್ತಾರೆ.

ಫೇಸ್‍ಬುಕ್ ಎಂಬ ಮಾಯಾಜಾಲ:

facebook ಗೆ ಚಿತ್ರದ ಫಲಿತಾಂಶ

      ಹೀಗೆ ಫೇಸ್‍ಬುಕ್ ಒಳಗಿನ ಮತ್ತು ಹೊರಗೆ ಇರುವಂತಹ ಬದುಕನ್ನು ತುಲನೆ ಮಾಡುತ್ತಾ ಸಾಗಿದರೆ ಸಾಕಷ್ಟು ವಿವರಣೆ ನೀಡಬಹುದು, ಉದಾಹರಣೆ ನೀಡಬಹುದು.ಇನ್ನೂ ಒಂದಿಷ್ಟು ಮಾಹಿತಿ ನೀಡುವುದಾದರೆ ಇತ್ತೀಚಿಗಷ್ಟೇ ಯುವತಿಯೋರ್ವಳು ಫೇಸ್‍ಬುಕ್ ಲೈವ್‍ನಲ್ಲಿ ಯಾರೂ ಲೈಕ್ ಮಾಡಿಲ್ಲ ಎಂಬ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಂತಹ ದುರದೃಷ್ಟಕರಘಟನೆಯನ್ನು ಇಲ್ಲಿ ಸ್ಮರಿಸಬಹುದು. ಇಂತಹ ಅದೆಷ್ಟೋ ಘಟನೆಗಳು ಪ್ರತಿನಿತ್ಯ ಕಾಣಸಿಗುತ್ತವೆ. ಫೇಸ್‍ ಟು ಫೇಸ್ ನೋಡದಿದ್ರೂ ನಡೆದಂತಹ ಫೇಸ್‍ಬುಕ್ ಲವ್. ಕೊನೆಗೆ ಇಬ್ಬರೂ ಜೊತೆಗೂಡಿ ಸುತ್ತಾಟ ನಂತರ ಮದುವೆ ಆದಂತಹ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಇನ್ನೂ ಕೆಲವು ಫೇಸ್‍ಬುಕ್‍ನಲ್ಲಿನ ಕೇವಲ ಫೋಟೋ ನೋಡಿ ಲವ್ ಮಾಡಿ ಪ್ರತ್ಯಕ್ಷವಾಗಿ ಕಂಡಾಗ ಅಸಹ್ಯಿಸಿಕೊಂಡು ಬ್ರೇಕ್‍ ಅಪ್ ಮಾಡಿಕೊಂಡು ಜಗಳಗಳೇ ನಡೆದಂತಹ ಘಟನೆಗಳೂ ಇವೆ. ಮತ್ತೂ ಕೆಲವರು ರಾಜಕೀಯ ಮತ್ತು ಧಾರ್ಮಿಕ ವಿಷಯಗಳನ್ನು ಪ್ರಚಾರ ಮಾಡಲು ಫೇಸ್‍ಬುಕ್‍ನ್ನು ಉಪಯೋಗಿಸುತ್ತಿದ್ದಾರೆ. ಹಾಗಾಗಿ ಈ ಫೇಸ್‍ಬುಕ್‍ ಒಂಥರಾ ಎಲ್ಲವನ್ನೂ ತನ್ನಲ್ಲಿ ಅಡಗಿಸಿಕೊಂಡ ಮಾಯಾಜಾಲವಾಗಿದೆ.

ಫೇಸ್‍ಬುಕ್ ಬಳಕೆ ಇತಿಮಿತಿಯಲ್ಲಿರಲಿ:

ಸಂಬಂಧಿತ ಚಿತ್ರ

      ಕೆಲವರು ತಿಳಿಸುವ ಪ್ರಕಾರ ಫೇಸ್‍ಬುಕ್‍ನಲ್ಲಿ ಅವರಿಗೆ ಒಂದು ಸಾವಿರಕ್ಕೂ ಮೀರಿ ಸ್ನೇಹಿತರುಇದ್ದಾರೆ. ಒಂದಷ್ಟು ಜನರಿಗಂತೂ ಫೇಸ್‍ಬುಕ್ ಮಾಡಿರುವ ಲಿಮಿಟ್‍ಕೂಡ ಮೀರಿದೆ. ಆದರೆಇಲ್ಲಿ ಬಹುಮುಖ್ಯವಾಗಿ ಕೇಳಿಕೊಳ್ಳಬೇಕಿರುವ ಪ್ರಶ್ನೆ ಸಾವಿರ ಮಂದಿಯಲ್ಲಿ ಎಷ್ಟು ಜನರ ವೈಯಕ್ತಿಕ ಪರಿಚಯ ನಮಗೆ ಇದೆಎಂಬುದು!! ಆ ಪರಿಚಯದವರಲ್ಲಿ ಎಷ್ಟು ಜನ ಆತ್ಮೀಯರು ಎಂದು. ವೈಯಕ್ತಿಕ ನೆಲೆಯಲ್ಲಿ ಪರಿಚಯವೇ ಇಲ್ಲದ ನಾವೆಲ್ಲ ಫೇಸ್‍ಬುಕ್‍ನಲ್ಲಿ ಸ್ನೇಹಿತರಾಗಿರುವುದರ ಉದ್ದೇಶ ಒಂದು ಮನುಷ್ಯ ಸಮಾಜವಾಗಿ ಒಂದು ಸಮೃದ್ಧ ಸಂಘಟಿತ ಸಮಾಜವನ್ನು ಕಟ್ಟಲು ಹೊರತು ನಾಶಗೊಳಿಸಲು ಅಲ್ಲ ಅನ್ನುವುದು ನನ್ನ ಅನಿಸಿಕೆ. ಈ ರೀತಿಯ ಗುರಿ ಸಾಧನೆಗೆ ಫೇಸ್‍ಬುಕ್‍ನಂತಹ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಬೇಕೆ ಹೊರತು ಕೇವಲ ಲೈಕ್‍ಗಳಿಗಾಗಿ, ಶೇರ್ ಗಳಿಗಾಗಿ, ಕಾಮೆಂಟ್‍ಗಳಿಗಾಗಿ ಅಲ್ಲ. ಹಾಗೆಯೇ  ರಾಜಕೀಯ,ಧಾರ್ಮಿಕ ವಿಚಾರಗಳಂತವುಗಳನ್ನು ಪ್ರಚಾರಿಸುವವರ ಬಗ್ಗೆ ಎಚ್ಚರದಿಂದ ಇರಬೇಕು.

      ಅತಿಯಾದರೆ ಅಮೃತವೂ ವಿಷವಾಗುತ್ತದೆ. ಅಂತೆಯೇ ಈ ಫೇಸ್‍ಬುಕ್‍ನಂತಹ ಸಾಮಾಜಿಕ ಜಾಲತಾಣಗಳನ್ನು ಅಗತ್ಯಕ್ಕೆ ತಕ್ಕಷ್ಟು ಉಪಯೋಗಿಸಿದರೆ ಒಳಿತು.ಇಲ್ಲವಾದಲ್ಲಿ ಮಾನಸಿಕ ನೆಮ್ಮದಿ, ಆರೋಗ್ಯ ಹದಗೆಟ್ಟು ಬದುಕಲ್ಲಿ ಬರೀಕಿರಿಕಿರಿ ಅನುಭವಿಸಬೇಕಾದೀತು. ಈ ಬಗ್ಗೆ ಎಚ್ಚರ ಮತ್ತು ಕಾಳಜಿ ಅತ್ಯಗತ್ಯ.

-ಲಕ್ಷ್ಮೀಕಾಂತ್‍ಎಲ್ ವಿ
ತುಮಕೂರು

LEAVE A REPLY

Please enter your comment!
Please enter your name here