ತಿಪಟೂರು : ನಗರದಲ್ಲಿ ಕಸ ಸಂಗ್ರಹಕ್ಕೆ ಹಣ ಕೊಡಬೇಕಿಲ್ಲ

ತಿಪಟೂರು:

     ನಗರಸಭೆ ವತಿಯಿಂದ ದಿನನಿತ್ಯ ಕಸ ಸಂಗ್ರಹಕ್ಕೆ ಬರುವ ವಾಹನಗಳಿಗೆ ಯಾರು ಹಣವನ್ನು ಕೊಡಬೇಕಿಲ್ಲ. ಹಾಗೇನಾದರೂ ಕೇಳಿದರೆ ನಮ್ಮ ಗಮನಕ್ಕೆ ತನ್ನಿ ಎಂದು ನಗರಸಭಾಧ್ಯಕ್ಷ ರಾಮ್‍ಮೋಹನ್ ತಿಳಿಸಿದರು.

      ನಗರಸಭೆಯಲ್ಲಿ ಬುಧವಾರ ನಡೆದ ಸಾಮಾನ್ಯಸಭೆಯಲ್ಲಿ ಮಾತನಾಡಿದ ಅವರು ಸಾರ್ವಜನಿಕರು ನಗರಸಭೆಯಿಂದ ಕಸ ಸಂಗ್ರಹಿಸುವುದಕ್ಕೆ ಕಂದಾಯದ ಜೊತೆಯೇ ಶುಲ್ಕ ಕಟ್ಟುತ್ತಿದ್ದಾರೆ. ಕಸ ಸಂಗ್ರಹಿಸುವ ವಾಹನದವರು ಹಣ ಕೇಳಿದರೆ ಕೊಡಬೇಡಿ ಹಾಗೂ ಕಸವನ್ನು ಹಾಕಿಸಿಕೊಳ್ಳಲು ಹಣವನ್ನು ಕೊಡಲೇಬೇಕು ಎಂದು ಕೇಳಿದರೆ ಅಧಿಕಾರಿಗಳ ಗಮನಕ್ಕೆ ಅಥವಾ ನಗರಸಭಾ ಸದಸ್ಯರ ಗಮನಕ್ಕೆ ತನ್ನಿ ಎಂದು ತಿಳಿಸಿದರು.

     ಯು.ಜಿ.ಡಿ, 24/7 ನೀರಿನ ಸಮರ್ಪಕ ನಿರ್ವಹಣೆ ಇಲ್ಲ :

     ನಗರದ ಎಲ್ಲಾ ವಾರ್ಡ್‍ಗಳಲ್ಲಿ ಅದರಲ್ಲೂ ಗಾಂಧಿನಗರದ ಬಾಗದಲ್ಲಂತೂ ಯು.ಜಿ.ಡಿ ಸಮಸ್ಯೆ ಹೇಳ ತೀರದಾಗಿದೆ. ಯು.ಜಿ.ಡಿ ಮಾಡಲು ಹೋಗಿ ಕುಡಿಯಲು ನೀರಿಲ್ಲದಂತೆ ಮಾಡಿದ್ದಾರೆ, ಪೈಪ್‍ಲೈನ್ ಸಂಪೂರ್ಣವಾಗಿ ಹಾಳಾಗಿದ್ದು ಟ್ಯಾಂಕರ್ ನೀರು ತೆಗೆದುಕೊಂಡು ಬರಲು ರಸ್ತೆಗಳು ಸರಿಇಲ್ಲ, ಚೆನ್ನಾಗಿ ನೀರು ಬರುತ್ತಿದ್ದ ಬೋರ್‍ವೆಲ್‍ಗೆ ಕಲ್ಲು ಹಾಕಿ ಜಖಂಗೊಳಿಸಿದ್ದಾರೆ. ಇದಕ್ಕೆ ನಗರಸಭೆಯವರೇ ನೇರಹೊಣೆ ಎಂದ ುನಗರಸಭಾ ಸದಸ್ಯಕೋಟೆ ಪ್ರಭು ಆರೋಪಿಸಿದರು. ಗಾಂಧಿನಗರ ವಾರ್ಡ್‍ಗಳ ಸದಸ್ಯರೊಂದಿಗೆ ಬಹುತೇಕ ಸದಸ್ಯರು ಧನಿಗೂಡಿಸಿದರು.  ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಶೀಘ್ರವಾಗಿ ಸಮಸ್ಯೆ ಬಗೆಹರಿಸಲಾಗುವುದೆಂದು ಭರವಸೆ ನೀಡಿದರು.

     ಬೋರ್‍ವೆಲ್‍ ಕೊರೆಸಲು ಹಣವಿರುತ್ತದೆ ಮೋಟಾರ್‍ಗೆ ಹಣವಿಲ್ಲವೇ :

      ನಗರಸಭೆಯಿಂದ ನಗರದ ಮೂಲೆಮೂಲೆಗಳಲ್ಲಿ ಬೋರ್‍ವೆಲ್‍ಗಳನ್ನು ಕೊರೆದು ಬಿಟ್ಟಿದ್ದಾರೆ. ಆದರೆಚೆನ್ನಾಗಿ ನೀರು ಬಂದಿರುವ ಬೋರ್‍ಗಳಿಗೆ ಮೋಟರ್ ಬಿಡಲು ನಗರಸಭೆಯಲ್ಲಿ ಹಣವಿಲ್ಲದಿರುವುದು ವಿಪರ್ಯಾಸವಾಗಿದೆ ಎಂದರು.

      ಹೇಮಾವತಿ ನೀರನ್ನು ಎ.ಇ.ಇ.ಗೆ ಕುಡಿಸಿ :

      ಈಚನೂರು ಕೆರೆಗೆ ಹಾಗೂ ಹೇಮಾವತಿ ನಾಲೆಗೆ ನಗರದಚರಂಡಿ ಮತ್ತು ಯು.ಜಿ.ಡಿ.ಯಕಲುಷಿತ ನೀರು ಸೇರುತ್ತಿರುವ ಕುರಿತು ಪ್ರಜಾಪ್ರಗತಿಯ ದಿನ ಪತ್ರಿಕೆಯಲ್ಲಿ ವರದಿಯಾಗಿತ್ತು. ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ನೀರು ಸರಿಯಾಗಿ ಶುದ್ದೀಕರಣ ಗೊಳ್ಳುತ್ತಿಲ್ಲವೆಂದು ಸದಸ್ಯರಾದ ಯೋಗೀಶ್, ಟಿ.ಎನ್.ಪ್ರಕಾಶ್ ಆರೋಪಿಸಿ ಎ.ಇ.ಇ.ಗೆ ಹೇಮಾವತಿ ನೀರನ್ನು ಕುಡಿಸಿ ಎಂದು ಪಟ್ಟು ಹಿಡಿದರು.

      ನಿಮ್ಮ ಬಡಾವಣೆಯಲ್ಲಿ ಎಲ್ಲರೂ ಆರ್.ಓ ನೀರನ್ನು ಕುಡಿಯುತ್ತಾರೆ. ಹೇಮಾವತಿ ನೀರನ್ನು ಯಾರು ಕುಡಿಯುವುದಿಲ್ಲ ಸುಮ್ಮನೇ ಏಕೆ ನೀರು ಚೆನ್ನಾಗಿಲ್ಲವೆಂದು ಆರೋಪಿಸುತ್ತೀರಾ ಎಂದು ನಮ್ಮನ್ನೇ ಎ.ಇ.ಇ. ದೂಷಿಸುತ್ತಾರೆಂದು ವಾರ್ಡ್ ನಂ 8ರ ಸದಸ್ಯೆ ಜಯಲಕ್ಷ್ಮಿ ಆರೋಪಿಸಿದರು.

      ವಾರ್ಡ್ ನಂ 15ರ ವಿನುತಾ ಮಾತನಾಡಿ ನನ್ನನ್ನು ನಗರಸಭಾ ಸದಸ್ಯರನ್ನಾಗಿ ಆಯ್ಕೆಮಾಡಿರುವ ಸಾರ್ವಜನಿಕರಿಗೆ ನಾನು ಮುಖ ತೋರಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ವಾರ್ಡ್‍ನಲ್ಲಿ ಸೂಕ್ತ ನೀರು ಸರಬರಾಜಿಲ್ಲ, ವಿದ್ಯುತ್ ದೀಪದ ಸಮಸ್ಯೆ ಹೇಳತೀರದ್ದಾಗಿದ್ದು, ಕೂಡಲೆ ಸರಿಪಡಿಸುವಂತೆ ಆಗ್ರಹಿಸಿದರು.

ಅಜೆಂಡಾ ಸರಿಇಲ್ಲ ಸಭೆ ಮುಂದಕ್ಕೆ ಹಾಕಿ :

      ನಗರಸಭೆಯ ಸಾಮಾನ್ಯ ಸಭೆಯಲ್ಲಿ ಅಜೆಂಡಾ ಮುಖ್ಯವಾಗಿರುತ್ತದೆ. ಆದರೆ ಈ ಅಜೆಂಡಾದಲ್ಲಿ ಹಲವಾರು ತಪ್ಪುಗಳು ಹಾಗೂ ಟಿಪ್ಪಣಿ, ಟೆಂಡರ್ ಪ್ರಕ್ರಿಯೆಯೇ ಗೋಜಲಾಗಿದ್ದು ಸಭೆಯನ್ನು ಮುಂದೆ ಹಾಕಬೇಕು ಎಂದು ಮಾಜಿ ಅಧ್ಯಕ್ಷ ಪ್ರಕಾಶ್, ಯೋಗೀಶ್, ಯೋಗೀಶ್, ಶ್ರೀನಿವಾಸ್ ಪಟ್ಟು ಹಿಡಿದರು. ಆದರೆ ಇದಕ್ಕೆ ಸಮಜಾಯಿಶಿ ನೀಡಿದ ಪೌರಾಯುಕ್ತರು ಕ್ಷಮೆ ಕೇಳಿ ಸಭೆಯನ್ನು ಮುಂದುವರೆಸಿದರು.

      ಕಳೆದ 2 ವರ್ಷದಿಂದಲೂ ನಗರಸಭೆಯಲ್ಲಿ ಜನಪ್ರತಿನಿಧಿಗಳಿಲ್ಲದೇ ಅಧಿಕಾರಿಗಳ ಆಡಳಿತವಿತ್ತು. ಮೊನ್ನೆಆರಂಭವಾದ ಹೊಸ ಸದಸ್ಯರು, ಅಧ್ಯಕ್ಷರಿಗೆ ಅಧಿಕಾರ ಸಿಕ್ಕ ಮೊದಲನೇ ಸಭೆಯಲ್ಲಿ ಎಲ್ಲರೂ ಹಾಜರಿದ್ದರು.

ಕಾದುನೋಡೋಣ :

      ನಗರದಲ್ಲಿ ಸುಧಾರಣೆಗಿಂತ ಹೆಚ್ಚಾಗಿ ಸಮಸ್ಯೆಗಳೇ ಹೆಚ್ಚಾಗಿದ್ದು ಇನ್ನು ಮುಂದಿನ ದಿನಗಳಲ್ಲಿ ಸಮಸ್ಯೆಗಳು ಹೆಚ್ಚುತ್ತಾ ಹೋಗುತ್ತವೋ ಇಲ್ಲ. ಎಲ್ಲವನ್ನು ನೂತನ ಅಧ್ಯಕ್ಷರು ಹೆಚ್ಚಿನ ಮುತುವರ್ಜಿ ವಹಿಸಿ ನಗರವನ್ನು ಸೂಕ್ತ ದಾರಿಗೆ ತರುತ್ತಾರೋ ಎಂಬ ಕಾಯ್ದು ನೋಡುವ ಸ್ಥಿತಿಯಲ್ಲಿ ಸಾರ್ವಜನಿಕರಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link