ತಿಪಟೂರು :
ಬರುವಾಗ ಒಂಟಿ, ಹೋಗುವಾಗ ಒಂಟಿ, ಬದುಕಿರುವಾಗ ನಿನ್ನ ಶವವವನ್ನು ಸಾಗಿಸಲು 4 ಜನರನ್ನಾದರು ಸಂಪಾದಿಸು ಎಂದು ಹಿರಿಯರ ಮಾತಿದೆ. ಹಾಗೆಯೇ ತಿಪಟೂರಿನ ಮದಿನಾ ಮಸೀದಿಯ ಮುಸಲ್ಮಾನ ಬಾಂದವರು ಮಾತ್ರ ಯಾರಾದರೂ ಕೊರೊನಾದಿಂದ ಮೃತಪಟ್ಟರೆ ಅಂತವರ ಅಂತ್ಯ ಸಂಸ್ಕಾರವನ್ನು ಮಾಡಿ ಮಾನವೀಯತೆ ಮೆರೆಯುತ್ತಿದ್ದಾರೆ.
ಹುಟ್ಟು ಉಚಿತ, ಸಾವು ಖಚಿತ ಹಾಗೆಯೇ ಸತ್ತಾಗ ಅದರಲ್ಲೂ ಕೊರೋನ ರೋಗದಿಂದ ಸತ್ತರೆ, ಬಡವ, ಸಾಹುಕಾರ ಹಿಂದೂ, ಮುಸಲ್ಮಾನ, ಕ್ರೈಸ್ತ, ಯಾವ ಧರ್ಮವನ್ನು ನೋಡದೆ ಮಾನವರೆಲ್ಲ ಒಂದೇ ಎಂದು ಸಾರಿ ತೋರಿಸುತ್ತಿದ್ದಾರೆ.
ತಿಪಟೂರು ತಾಲ್ಲೂಕಿನ ಆದಿನಾಯಕನಹಳ್ಳಿಯ ಗ್ರಾಮದ ನಿವೃತ್ತ ಸೈನಿಕ (ಸುಬೇದಾರ್) ಕುಟುಂಬದ ಕೃಷ್ಣಪ್ರಸಾದ್‍ರ ಮೊದಲನೇ ಮಗನಾದ ಬಲರಾಮ್‍ಪ್ರಸಾದ್ ಬೆಂಗಳೂರಿನಲ್ಲಿ ವಾಸವಿದ್ದು ಕೊರೊನ ರೋಗದ ಭಯದಿಂದ ತಮ್ಮ ಹುಟ್ಟೂರಿಗೆ ವಾಪಾಸಾಗಿ ನಂತರ ಕೋವಿಡ್‍ಗೆ ತುತ್ತಾಗಿ ಮೃತರಾದರು. ಆ ಸಂದರ್ಭದಲ್ಲಿ ಕುಟುಂಬಸ್ಥರು, ಒಡಹುಟ್ಟಿದವರು, ಯಾರು ಬರಲಿಲ್ಲ ನಂತರ ಸಹಾಯಕ್ಕೆ ಬಂದವರು ಮುಸಲ್ಮಾನ ಬಂಧುಗಳು ಮಾತ್ರ. ತಮ್ಮ ಪವಿತ್ರ ರಂಜಾನ್ ಹಬ್ಬವನ್ನು ಲೆಕ್ಕಿಸದೆ ಬ್ರಾಹ್ಮಣ ಧರ್ಮನುಸಾರವಾಗಿ ಅಂತಿಮ ವಿಧಿವಿಧಾನಗಳನ್ನು ಯಾವುದೇ ಫಲಾಪೇಕ್ಷೇ ಇಲ್ಲದೆ ನೆರವೇರಿಸಿ ಜನಮನ್ನಣೆ ಗಳಿಸಿದ್ದಾರೆ.
ಮದೀನಾ ಮಸೀದಿಯ ಅಧ್ಯಕ್ಷ ಮಹಮದ್ ದಸ್ತಗೀರ್, ಉಪಾಧ್ಯಕ್ಷ ಸೈಪುಲ್ಲ, ಮಹಮ್ಮದ್ ಇಸಾಕ್, ಸಿದ್ದಿಕ್, ಮಹಮದ್ ಹುಸೆನ್, ಅತೀಕ್‍ಪಾಷ, ಮೋಸಿನ್, ಸದ್ದಾಂ, ಸುಭಾನ್, ಶಾಹಿದ್, ಇಬ್ರಾಹಿಂ ಮತ್ತು ಯಾಸೀನ್ ಇಂತಹ ಮಾನವೀಯ ಕಾರ್ಯವನ್ನು ಮಾಡುತ್ತಿದ್ದು, ಇವರು ಇನ್ನು ಇಂತಹ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುವಂತಾಗಲಿ ಎಂದು ಸಾರ್ವಜನಿಕರು ಹಾರೈಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
