ತೋವಿನಕೆರೆ :
ಕೊರೊನಾ ಸಂಕಷ್ಟದಿಂದ ಎಲ್ಲಾ ರೀತಿಯ ಹೂವು ಬೆಳೆಗಾರರು ನಷ್ಠ ಅನುಭವಿಸಿ ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಸರ್ಕಾರ ಕೂಡಲೇ ಅವರುಗಳಿಗೆ ಸೂಕ್ತ ಪರಿಹಾರ ಮತ್ತು ಬಡ್ಡಿ ರಹಿತ ಸಾಲ ನೀಡ ಬೇಕೆಂದು ಶ್ರಮಿಕ ಸಿರಿ ಬೆಳೆಗಾರ ಸಂಘದ ಅಧ್ಯಕ್ಷ ಜೆ.ಸಿ.ಸೋಮಶೇಖರ್ ಒತ್ತಾಯಿಸಿದ್ದಾರೆ.
ಕಳೆದ ವರ್ಷ ಕೊರೊನಾ ಸಮಯದಲ್ಲಿ ಹೂವು ಬೆಳೆಗಾರರನ್ನು ಸರಿಯಾಗಿ ಗುರ್ತಿಸದೆ ಅಲ್ಪ ಪರಿಹಾರ ನೀಡಿ ಕೈತೊಳೆದು ಕೊಂಡಿತ್ತು. ನಲ್ವತ್ತು ಸಾವಿರದಿಂದ ಲಕ್ಷದವರೆಗೂ ಖರ್ಚು ಮಾಡಿ ವಿವಿದ ರೀತಿಯ ಹೂವುಗಳನ್ನು ಬೆಳೆದಿದ್ದ ಬೆಳೆಗಾರರಿಗೆ ಯಾವುದೆ ಪ್ರಯೋಜನವಾಗಲಿಲ್ಲ. ಸರ್ಕಾರ ಕೃಷಿ ಇಲಾಖೆ ಮೂಲಕ ಮುಂಗಾರು ಸಮಯದಲ್ಲಿ ಬೆಳೆ ಸಮೀಕ್ಷೆ ಮಾಡಿಸಿದಾಗ ಕೇವಲ ಕಾಕಡ, ಕನಕಾಂಬರ ಮತ್ತು ಮಲಿಗೆ ಮಾತ್ರ ಗುರ್ತಿಸಲಾಗುತ್ತದೆ. ರೈತರು ಹಬ್ಬ, ಮದುವೆಗಳ ಕಾಲಕ್ಕೆ ಬರುವಂತೆ 3-4 ತಿಂಗಳಲ್ಲಿ ಹೂವು ಬಿಡುವ ಬಟನ್ಸ್, ಪೂರ್ಣಿಮಾ, ಪಚ್ಚೆ, ಸೇವಂತಿಗೆ ಹೂವನ್ನು ಬೆಳೆದು ಮಾರಾಟ ಮಾಡುತ್ತಾರೆ.
ಎರಡು ವರ್ಷಗಳಿಂದ ಮಾರಾಟ ಮಾಡುವ ಸಮಯದಲ್ಲಿ ಕೊರೊನಾದಿಂದ ಪರ ಸ್ಥಳಗಳಿಗೆ ಸಾಗಾಣಿಕೆ ಮಾಡಲು ಸಾಧ್ಯವಾಗದೆ ಕೊಟ್ಯಂತರ ರೂ.ಗಳನ್ನು ಕಳೆದುಕೊಂಡಿದ್ದಾರೆ.
ಚನ್ನರಾಯನ ದುರ್ಗ ಹೋಬಳಿಯಲ್ಲಿ 500 ಕ್ಕೂ ಹೆಚ್ಚು ಹೂವು ಬೆಳೆಗಾರರು ಹಣ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.
ಕಳೆದ 3 ತಿಂಗಳಿಂದ ಹೂವು ಮಾರಾಟ ಮಾಡಲು ಸಾಧ್ಯವಾಗದೆ ನಷ್ಟ ಅನುಭವಿಸಿರುವ ರೈತರುಗಳು ತಾಕುಗಳ ಸಮೀಕ್ಷೆ ಮಾಡಿ ಗುಂಟೆಗೆ ಐದು ಸಾವಿರ ಪರಿಹಾರ ಮತ್ತು ಪ್ರತಿಯೊಬ್ಬ ರೈತನಿಗೆ ಒಂದು ಲಕ್ಷ ರೂ. ಸಾಲವನ್ನು ಬಡ್ಡಿ ರಹಿತವಾಗಿ ನೀಡಬೇಕೆಂದು ಜೆ.ಸಿ. ಸೋಮಶೇಖರ್ ಅಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
