ತಿಪಟೂರು :
ನಗರದ ಪ್ರಧಾನ ಅಂಚೇಕಚೇರಿಯ ಮುಂದೆ ದಿನನಿತ್ಯ ವೃದ್ಧರು ಕಾಯುತ್ತಿದ್ದು ವಿಚಾರಿಸಿದಾಗ ಸರ್ಕಾರದಿಂದ ಕೊಡುತ್ತಿರುವ ವೃದ್ಧಾಪ್ಯವೇತನ, ವಿಧವಾವೇತನವನ್ನು ಪಡೆಯಲುನಾವು ಬಂದಿರುವುದಾಗಿ ತಿಳಿಸಿದರು. ಸರ್ಕಾರದ ಆದೇಶದಂತೆ ಅಂಚೆ ವಿತರಕರು ವೃದ್ದಾಪ್ಯವೇತನ ಮತ್ತು ವಿಧವಾವೇತನವನ್ನು ಫಲಾನುಭವಿಯ ಮನೆಯ ಹತ್ತಿರ ತಲುಪಿಸುವಂತೆ ಆದೇಶವಿದೆ.
ಆದರೆ ದೇವರು ಕೊಟ್ಟರು ಪೂಜಾರಿಕೊಡ ಎಂಬಂತೆ ನಾವೇ ಬೆಳಗ್ಗೆಯೇ ಬಂದು ಅಂಚೆವಿತರಕನು ಬಂದಾಗ ಅವನ ಹತ್ತಿರ ಸಹಿಮಾಡಿಕೊಂಡು ಅವನು ನಮ್ಮ ಹಣದಲ್ಲಿ 20 ರಿಂದ 50ರೂ ಕಡಿತಗೊಳಿಸಿಕೊಡುತ್ತಾನೆ ಎಂದು ವೃದ್ಧರು ದೂರಿದ್ದು ಸಂಬಂದಪಟ್ಟ ಅಧಿಕಾರಿಗಳು ಇದನ್ನು ಪರಿಗಣಿಸಿ ವೃದ್ಧರ ಅಲೆದಾಟವನ್ನು ತಪ್ಪಿಸಬೇಕು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ