ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗೆ 10 ವರ್ಷ ಸಜೆ

ತುಮಕೂರು:

      ಆರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಸುಮಾರು 35 ವರ್ಷ ವಯಸ್ಸಿನ ಆರೋಪಿಗೆ ಇಲ್ಲಿನ ಮೂರನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ವರ್ಷಗಳ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.

       ತುಮಕೂರು ತಾಲ್ಲೂಕಿಗೆ ಸಂಬಂಧಿಸಿದ ಗ್ರಾಮವೊಂದರಲ್ಲಿ ದಿ: 23.6.2017 ರಲ್ಲಿ ಈ ಘಟನೆ ನಡೆದಿತ್ತು. ಅಂದು ಸಂಜೆ 5.30ರ ಸಮಯದಲ್ಲಿ 6 ವರ್ಷದ ಬಾಲಕಿ ತನ್ನ ಇತರೆ ಗೆಳೆತಿಯರೊಂದಿಗೆ ದೇವಸ್ಥಾನದ ಮುಂಭಾಗದಲ್ಲಿ ಆಟ ಆಡಿಕೊಂಡಿದ್ದಳು. ಇದನ್ನು ಗಮನಿಸಿದ ಆರೋಪಿತ ವ್ಯಕ್ತಿ ಸದರಿ ಬಾಲಕಿಯನ್ನು ಚಾಕೋಲೇಟ್ ನೀಡುವ ನೆಪದಲ್ಲಿ ದೇವಸ್ಥಾನದ ಹಿಂಭಾಗಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದ್ದ. ಈ ಸಂಬಂಧ ತಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

       ಪ್ರಕರಣದ ವಿಚಾರಣೆಯು ಮೂರನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಭಾರತ ದಂಡ ಸಂಹಿತೆ ಕಲಂ376 (2) (1) ಅಪರಾಧಕ್ಕಾಗಿ ಹಾಗೂ ಪೋಕ್ಸೋ ಕಾಯ್ದೆ ಕಲಂ 6ರ ಅನ್ವಯ 10 ವರ್ಷಗಳ ಕಠಿಣ ಶಿಕ್ಷೆ ಮತ್ತು 60ಸಾವಿರ ರೂ.ಗಳ ದಂಡ ವಿಧಿಸಿ ನ್ಯಾಯಾಧೀಶರಾದ ಮಲ್ಲಿಕಾರ್ಜುನಸ್ವಾಮಿ ಅವರು ತೀರ್ಪು ನೀಡಿದ್ದಾರೆ. ದಂಡ ಕೊಡಲು ತಪ್ಪಿದಲ್ಲಿ 6 ತಿಂಗಳ ಜೈಲುವಾಸ ಅನುಭವಿಸಲು ತೀರ್ಪಿನಲ್ಲಿ ಹೇಳಲಾಗಿದೆ. ಸರ್ಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕರಾದ ಗಾಯತ್ರಿ ರಾಜು ವಾದ ಮಂಡಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link