ಶೋಕಾಚರಣೆಯ ನಡುವೆಯು ಧ್ವಜಸ್ಥಂಬದ ಮೇಲ್ಭಾಗದಲ್ಲಿ ಹಾರಾಡಿದ ರಾಷ್ಟ್ರಧ್ವಜ

ತಿಪಟೂರು

        ತಾಲ್ಲೂಕಿನ ಹುಣಸೇಘಟ್ಟ ಗ್ರಾಮಪಂಚಾಯಿತಿಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಅಂಬರೀಶ್ ಕೇಂದ್ರ ಹಾಗೂ ರಾಜ್ಯದ ಮಾಜಿಸಚಿವರು ಹಾಗೂ ಪ್ರಖ್ಯಾತ ಕನ್ನಡ ಚಿತ್ರನಟರು ನಿಧನರಾದ ಹಿನ್ನೆಲೆಯಲ್ಲಿ ನವೆಂಬರ್ 25 ರಿಂದ 27ರವರೆಗೆ ರಾಜ್ಯದಾದ್ಯಂತ ಶೋಕಾಚರಣೆ ಇರುವಾಗಲೆ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲು ಸರ್ಕಾರಿ ಆದೇಶಸಂಖ್ಯೆ:ಸಿಆಸುಇ52ಹೆಚ್‍ಹೆಚ್‍ಎಲ್ 2018 ದಿ:25-11-2018 ಆದೇಶಿಸಿದ್ದರು.

          ಸೋಮವಾರ ಕನಕ ಜಯಂತಿ ಇದ್ದು ಅದನ್ನು ಮಾತ್ರ ಸರ್ಕಾರಿ ಆದೇಶದಂತೆ ಆಚರಿಸದೆ ಕರ್ತವ್ಯವನ್ನು ಪಾಲಿಸದೆ ಕಚೇರಿಯ ಸಿಬ್ಬಂದಿಗೆ ಹೇಳಿ ರಾಷ್ಟ್ರಧ್ವಜವನ್ನು ಹಾರಿಸಲು ಹೇಳಿದ್ದಾರೆ. ಆದರೆ ಸಿಬ್ಬಂದಿಗೆ ಅರಿವಿಗೆ ಬಾರದೆ ಧ್ವಜಸ್ಥಂಬದ ಎತ್ತರಕ್ಕೆ ಹಾರಿಸಿ ಅಗಲಿದ ಗಣ್ಯರಿಗೆ ಅಗೌರವವನ್ನು ತೋರಿದ ಘಟನೆ ನಡೆದಿದೆ.

         ಇದರ ಬಗ್ಗೆ ಸಂಬಂಧಿಸಿದ ಪಿ.ಡಿ.ಓರನ್ನು ವಿಚಾರಿಸಿದಾಗ ನನಗೆ ಆರೋಗ್ಯ ಸರಿಇಲ್ಲದ್ದರಿಂದ ಸಿಬ್ಬಂದಿಗೆ ಹೇಳಿದ್ದೆ. ಅವರು ಹಾಗೆ ಹಾರಿಸಿದ್ದಾರೆಂದು ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡರು.ಈ ಘಟನೆಯ ಬಗ್ಗೆ ತಿಪಟೂರು ತಾಲ್ಲೂಕು ಪಂಚಾಯಿತಿ ಈ.ಓ.ರವರನ್ನು ಸಂಪರ್ಕಿಸಲು ಪ್ರಯತ್ನಿಸಿದರೆ ಅವರು ರಜೆಯ ಪ್ರಯುಕ್ತ ಮೊಬೈಲ್ ಸ್ವಿಚ್‍ಆಫ್‍ಆಗಿರುತ್ತದೆ.

          ಸಮಾಜಕ್ಕೆ ಮಾದರಿಯಾಗಿರಬೇಕಾಗಿದ್ದ ಅಧಿಕಾರಿಗಳೇ ಈ ರೀತಿ ವರ್ತಿಸಿದರೆ ಸಮಾಜವು ಉದ್ಧಾರವಾಗುವುದು ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link