ದತ್ತು ಸ್ವೀಕಾರ ಕಾರ್ಯ ಆನ್‍ಲೈನ್‍ನಲ್ಲಿ ನಡೆಯುವುದು ರಕ್ಷಣಾತ್ಮಕ ವಿಚಾರ

0
15

ಕುಣಿಗಲ್ :

         ಯಾವುದೇ ಸಂಸ್ಥೆಗಳು ಮಾಡುವ ತಪ್ಪುಗಳನ್ನು ನಾವು ಸಹಿಸುವುದಿಲ್ಲ. ಆದರೆ ಉತ್ತಮ ಕೆಲಸ ಮಾಡುವ ಸಂಸ್ಥೆಗಳನ್ನು ಅಭಿನಂದಿಸುತ್ತೇವೆ. ದತ್ತು ಸ್ವೀಕಾರ ಕಾರ್ಯ ಆನ್‍ಲೈನ್‍ನಲ್ಲಿ ನಡೆಯುವುದು ಒಂದು ರೀತಿಯ ರಕ್ಷಣಾತ್ಮಕ ವಿಚಾರವಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಾಣಾಧಿಕಾರಿ ವಾಸಂತಿಉಪ್ಪಾರ್ ತಿಳಿಸಿದ್ದಾರೆ.

         ತಾಲ್ಲೂಕಿನ ಕೊತ್ತಗೆರೆ ಹೋಬಳಿಯ ಭಕ್ತರಹಳ್ಳಿಯ ದಯಾಭವನ ಸಂಸ್ಥೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಕಾರದಲ್ಲಿ ಆರಂಭಿಸಲಿರುವ ದತ್ತುಕೇಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

        ಕಳೆದ 4 ವರ್ಷಗಳ ಹಿಂದೆ ಜಿಲ್ಲೆಯಲ್ಲಿದ್ದ ದತ್ತುಕೇಂದ್ರ ಅನಿವಾರ್ಯ ಕಾರಣಗಳಿಂದ ಮುಚ್ಚಿದ ನಂತರ ನಮ್ಮಲ್ಲಿ ಅಂತಹ ವ್ಯವಸ್ಥೆ ಇರಲಿಲ್ಲ. ದಯಾಭವನ ಸಂಸ್ಥೆ ಈ ಯೋಜನೆಯನ್ನು ಪ್ರಾರಂಭಿಸಿರುವುದು ಅಭಿನಂದನಾ ವಿಚಾರ ಎಂದರು.

        ದಯಾಭವನ ಸಂಸ್ಥೆಗೆ ಪ್ರತಿವರ್ಷವು ಒಂದೊಂದು ಜವಾಬ್ದಾರಿಗಳು ಬರುತ್ತಿವೆ. ಅದಕ್ಕೆ ಕಾರಣವಾಗಿರುವ ಇಲ್ಲಿನ ಮುಖ್ಯಸ್ಥರಾದ ಜಿನೇಶ್ ಕೆ ವರ್ಕಿ ಅವರ ತಂಡ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುದು ಎಂಬುದು ಸಾಬೀತಾಗಿದೆ.ದಯಾಭವನ್ ಸಮೂಜ ಸಂಸ್ಥೆಗಳ ಧರ್ಮಾಧ್ಯಕ್ಷ ಹೆಚ್ ಜಿ ಡಾ.ಅಬ್ರಹಾಂ ಮಾರ್ ಸೆರಾಫಿಮ್ ನಿರ್ಮಲವಾದ ಮನಸಿನಿಂದ ಸೇವೆ ಮಾಡಿದಾಗ ಭಗವಂತನಿಗೆ ತೃಪ್ತಿ ತುಂಬಲಿದೆ. ಅದರಿಂದ ಮಾನಸಿಕ ನೆಮ್ಮದಿ ಕೂಡ ದೊರಕಲಿದೆ ಎಂದರು. ದೇವರ ಇನ್ನೊಂದು ರೂಪವೆ ಪ್ರೀತಿ ಮತ್ತು ಸೇವೆ ಇವೆರಡು ಎಲ್ಲಾ ಕಾಣುತ್ತದೆ ಅಲ್ಲಿ ದೇವರು ಇರುತ್ತಾನೆ ಎಂದರು.

       ಜಿಲ್ಲೆಗೆ ಮೊದಲನೆ ದತ್ತುಕೇಂದ್ರವನ್ನು ಮಕ್ಕಳ ರಕ್ಷಾಣಾಧಿಕಾರಿ ವಾಸಂತಿ ಉಪ್ಪಾರ್ ಪ್ರಾರಂಭಿಸಿದ್ದಾರೆ. ಅವರ ನಂಬಿಕೆಯನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ದಯಾಭವನದ ಮೇಲಿದೆ ಎಂದರು.ಮುಂದಿನ ಪ್ರಜೆಗಳು ಎಂಬ ಮಾತುಗಳನ್ನು ಬಿಟ್ಟು ಇಂದಿನಿಂದಲೆ ಅವರು ನಮ್ಮ ಮಕ್ಕಳೆಂದು ಕಾಣುವ ಜೊತೆಗೆ ಅವರನ್ನು ಪ್ರೀತಿ ಮಮತೆಯಿಂದ ಕಾಣಬೇಕು. ಇದರಿಂದ ಮುಂದಿನ ಭವಿಷ್ಯದ ಪ್ರಜೆಗಳು ತಯಾರಾಗುತ್ತಾರೆ ಎಂದರು.

       ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ವೀರಭದ್ರಯ್ಯ ಮಾತನಾಡಿ ಬೀದಿ, ಪೊದೆ ಸೇರಿದಂತೆ ಇತರ ಸ್ಥಳಗಳಲ್ಲಿ ಬಿಸಾಡಿದ ಮಕ್ಕಳನ್ನು ರಕ್ಷಸಿ ಆರೋಗ್ಯವನ್ನು ಸುಸ್ಥಿತಿಗೆ ತಂದ ನಂತರ ಅವರನ್ನು ದತ್ತುಸ್ವೀಕಾರ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಆವಾಗ ಅವರಿಗೆ ಇಲ್ಲಿನ ಸಿಬ್ಬಂದಿ ಪ್ರೀತಿ ಮಮತೆ ಸೇರಿದಂತೆ ತಾಯ್ತನ ಕೊಟ್ಟು ಕಾಪಾಡಿ ಪ್ರತಿಯೊಂದು ಕಾನೂನಾತ್ಮಕವಾಗಿ ನಡೆಯಬೇಕು ಎಂದರು.ಸರ್ಕಾರ ಪ್ರತಿ ಮಗುವಿಗಾಗಿ ಜಾಗೃತಿ ವಹಿಸಲು ಸೂಚಿಸಿದ್ದು ಕಾನೂನಾತ್ಮಕವಾಗಿ ದತ್ತು ಪಡೆಯಲು ಅವಕಾಶವಿದೆ ಎಂದರು.

      ದಯಾಭವನ ಸಂಸ್ಥೆಯಲ್ಲಿ ಭಾಗವಹಿಸಿದ ಮಡಿಲು, ಮಕ್ಕಳಮನೆ, ನವಚೇತನ, ಅಂಧಮಕ್ಕಳ ಶಾಲೆ ಸೇರಿದಂತೆ ಹಲವಾರು ಸಂಸ್ಥೆಯ ಮಕ್ಕಳಿಗೆ ಪ್ರಮಾಣಪತ್ರ ನೀಡಲಾಯಿತು.ಈ ಸಂದರ್ಭದಲ್ಲಿ ದಯಾಭವನ ಸಂಸ್ಥೆಯ ಪ್ರಮುಖರಾದ ಜಿನೇಶ್ ಕೆ ವರ್ಕಿ , ಗ್ರಾ.ಪಂ ಅಧ್ಯಕ್ಷೆ ಮುನಿಯಮ್ಮ , ವ್ಯವಸ್ಥಾಪಕ ರಮೇಶ್ ಇದ್ದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here