ಸ್ವಾಮಿ ವಿವೇಕಾನಂದ ಆಶ್ರಮದ ಉಪ ಶಾಖೆಯ ಉದ್ಘಾಟನೆ

ಶಿರಾ

         ಶಿರಾ ನಗರದ ಚಂಗಾವರ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದ ಉಪಶಾಖೆಯ ಉದ್ಘಾಟನಾ ಸಮಾರಂಭ, ಪ್ರಾರ್ಥನಾ ಮಂದಿರ, ಸಾಧು ನಿವಾಸ ಕಟ್ಟಡಗಳ ಭೂಮಿ ಪೂಜಾ ಕಾರ್ಯಕ್ರಮವು ಮಾ.12 ರಂದು ನಡೆಯಲಿದೆ ಎಂದು ರಾಮಕೃಷ್ಣ ಮಠದ ಪೀಠಾಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.

         ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9.30ಕ್ಕೆ ಚೆನ್ನೈನ ರಾಮಕೃಷ್ಣ ಮಠದ ಉಪಾಧ್ಯಕ್ಷರಾದ ಪರಮಪೂಜ್ಯ ಸ್ವಾಮಿ ಗೌತಮಾನಂದಜಿ ಮಹಾರಾಜ್ ಅವರ ದಿವ್ಯ ನೇತೃತ್ವದಲ್ಲಿ ಆಶ್ರಮದ ಉದ್ಘಾಟನೆ ಹಾಗೂ ಪ್ರಾರ್ಥನಾ ಮಂದಿರ, ಸಾಧು ನಿವಾಸ ಕಟ್ಟಡಗಳ ಭೂಮಿ ಪೂಜಾ ಕಾರ್ಯಕ್ರಮ ನಡೆಯಲಿದ್ದು ಮಂಗಳೂರು ಶ್ರೀ ರಾಮಕೃಷ್ಣ ಮಠದ ಜಿತಕಾಮಾನಂದಜಿ ಮಹಾರಾಜ್ ದಿವ್ಯ ಸಾನ್ನಿಧ್ಯ ವಹಿಸುವರು ಎಂದು ತಿಳಿಸಿದರು.

         ಶಾಸಕ ಬಿ.ಸತ್ಯನಾರಾಯಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ನ್ಯಾಯಮೂರ್ತಿ ಡಾ.ಎಂ.ಎನ್.ವೆಂಕಟಾಚಲಯ್ಯ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಶಾಸಕ ಡಿ.ಆರ್.ಪಾಟೀಲ್ ಸೇರಿದಂತೆ ಅನೇಕ ಪ್ರಮುಖರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.

         ಇದೇ ಕಾರ್ಯಕ್ರಮದಲ್ಲಿ ತುಮಕೂರಿನಲ್ಲೂ ಈ ಹಿಂದಿನಿಂದಲೂ ನಡೆಸಿಕೊಂಡು ಬರಲಾಗುತ್ತಿರುವ ಜೀವಂತ ದುರ್ಗಾಪೂಜಾ ಕಾರ್ಯಕ್ರಮವನ್ನು ಮಾ.12ರಂದು ಶಿರಾದಲ್ಲಿ ನಡೆಯುವ ಕಾರ್ಯಕ್ರಮದಲ್ಲೂ ಹಮ್ಮಿಕೊಳ್ಳಲಾಗುವುದು. ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ಜೀವರಲ್ಲಿ ಶಿವನನ್ನು ಕಂಡು ಆರಾಧಿಸು ಎಂಬ ಹಿತೋಕ್ತಿಯನ್ನಾಧÀರಿಸಿದ ಜೀವಂತ ದುರ್ಗಾಪೂಜಾ ಕಾರ್ಯಕ್ರಮ ಇದಾಗಿದ್ದು ಶಿರಾ ನಗರದ ಕೊಳಗೇರಿಗಳಲ್ಲಿ ವಾಸ ಮಾಡುವ ರಸ್ತೆಯಲ್ಲಿ ಭಿಕ್ಷೆ ಎತ್ತುವ ಸುಮಾರು 100 ಕ್ಕೂ ಹೆಚ್ಚು ಮಂದಿ ಅಶಕ್ತ, ದೀನ-ದಲಿತ ತಾಯಂದಿರು ಆಗಮಿಸುತ್ತಿದ್ದು ಅವರನ್ನು ಪೂಜಿಸುವ ಮೂಲಕ ದೈವತ್ವವನ್ನು ಕಂಡು ಅನ್ನದಾನ, ವಸ್ತ್ರದಾನ, ಧಾನ್ಯದಾನಗಳಿಂದ ಸತ್ಕರಿಸಲಾಗುವುದು ಎಂದು ಸ್ವಾಮೀಜಿ ತಿಳಿಸಿದರು.

         ಅಂದು ನಡೆಯುವ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳಿಂದ ವಿಶೇಷ ಸತ್ಸಂಗ ಕಾರ್ಯಕ್ರಮ ನಡೆಯಲಿದ್ದು 1,000 ಮಂದಿ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಪೈಕಿ ಅತಿ ಹೆಚ್ಚು ಯುವಕ/ಯುವತಿಯರು ಪಾಲ್ಗೊಳ್ಳಲಿದ್ದು ಎಲ್ಲರಿಗೂ ಪ್ರಸಾದ ವಿನಿಯೋಗವಿರುತ್ತದೆ ಎಂದು ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.

          ಶಿರಾ ತಾಲ್ಲೂಕಿಗೂ ಶ್ರೀ ರಾಮಕೃಷ್ಣ ಮಠಕ್ಕೂ ಅವಿನಾಭಾವ ಸಂಬಂಧವಿದ್ದು, ಈ ಸಂಬಂಧ ಹಾಗೂ ಭಾವಾನಾತ್ಮಕತೆಯ ಒಡನಾಟಗಳಿಂದ ಇಲ್ಲೊಂದು ಉಪ ಶಾಖೆಯನ್ನು ಕೈಗೊಳ್ಳಲು ಸಾಧ್ಯವಾಗಿದೆ. ಈ ಭಾಗದ ಭಕ್ತರ ಸಹಕಾರಗಳಿಂದಾಗಿ ರಾಮಕೃಷ್ಣ ಮಠ ಶಿರಾ ಭಾಗದಲ್ಲೂ ಉತ್ತಮ ಸೇವೆ ಕೈಗೊಳ್ಳಲು ಸಾಧ್ಯವಾಗಲಿದೆ ಎಂದರು.

          ಕಳೆದ 25 ವರ್ಷಗಳಿಂದಲೂ ನಾವು ಶಿರಾದಲ್ಲಿ ನಡೆಯುವ ಧಾರ್ಮಿಕ, ಸಾಂಸ್ಕøತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಲೇ ಬಂದಿದ್ದು ಶ್ರೀಮಠದ ಭಕ್ತಾದಿಗಳ ಉದಾರತೆಯಿಂದಾಗಿ ಶಿರಾದಲ್ಲೂ ಶ್ರೀಮಠ ಉತ್ತಮ ಕೈಂಕರ್ಯ ಕೈಗೊಳ್ಳಲಿದೆ. ವಾರಕ್ಕೊಮ್ಮೆ ಶಿರಾ ನಗರದಲ್ಲಿಯೇ ತಾವು ವಾಸ್ತವ್ಯ ಮಾಡಲಿದ್ದು ತಾಲ್ಲೂಕಿನ ವಿವಿಧ ಶಾಲಾ-ಕಾಲೇಜುಗಳಲ್ಲಿ ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಪ್ರವಚನ, ಕಾರ್ಯಾಗಾರಗಳನ್ನು ರೂಪಿಸಿಕೊಳ್ಳಲಾಗುವುದು ಎಂದರು.ಚಿರತಹಳ್ಳಿ ಮೂಡಲಗಿರಿಗೌಡ, ನಂದಿನಿ ಶೇಖರ್, ಆರ್.ಲಕ್ಷ್ಮಣ್, ಸೋಮಶೇಖರ್, ನಿ.ಎಂಜಿನಿಯರ್ ಜೈರಾಮಯ್ಯ, ತುಳಸಿರಾಂ, ವೆಂಕಟೇಶ್‍ಗುಪ್ತ ಸೇರಿದಂತೆ ಅನೇಕ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link