ವಿದ್ಯಾರ್ಥಿಗಳ ಯಶಸ್ಸಿಗೆ ಸ್ವ ಅರಿವು ಮುಖ್ಯ

ಊರ್ಡಿಗೆರೆ:

       ಇಂದಿನ ಪ್ರೌಢ ವ್ಯವಸ್ಥೆಯ ಮಕ್ಕಳಲ್ಲಿ ಅತ್ಮ ವಿಶ್ವಾಸದ ಕೊರೆತೆಯಿದ್ದು, ಅದರಿಂದ ಮಕ್ಕಳು ಮಾನಸಿಕವಾಗಿ ಕುಬ್ಜರಾಗುತ್ತಿದ್ದರೆ. ಇದು ಸಮಾಜದ ಬೆಳವಣಿಗೆಗೆ ತೊಡಕು ಉಂಟು ಮಾಡುವ ಅಂಶ, ಎಂದು ನವ್ಯದಿಶ ಟ್ರಸ್ಟ್ ನ ಯೋಜನ ಸಂಯೋಜಕರಾದ ವಿ ಯಂಜೇರಪ್ಪ ತಿಳಿಸಿದರು.

       ನವ್ಯದಿಶ ಟ್ರಸ್ಟ್, ಗ್ರಾಮೀಣ ಕೂಟ ಹಾಗೂ ಸೆಂಟ್ರಲ್ ಹೈಸ್ಕೂಲ್ ಊರ್ಡಿಗೆರೆ, ಇವರ ಸಹಯೋಗದಲ್ಲಿ ಚೇತನ ಕಾರ್ಯಕ್ರಮದಡಿ ಹತ್ತನೇ ತರಗತಿ ವಿದ್ಯಾರ್ಥಿಗಳ ಮನೋವಿಕಾಸಕ್ಕಾಗಿ ಹಮ್ಮಿಕೊಂಡಿದ್ದ ಮೂರು ದಿನಗಳ ಶಿಬಿರವನ್ನು ಉದ್ದೇಶಿಸಿ ಮಾತಾನಾಡಿದರು.
ಒತ್ತಡ ನಿರ್ವಹಣೆ, ಸಂವಹನಕೌಶಲ್ಯ, ಧನಾತ್ಮಕ ಚಿಂತನೆ, ಅತ್ಮವಿಶ್ವಾಸ, ಪರೀಕ್ಷಾ ತಯಾರಿ, ಈ ವಿಷಯಗಳ ಬಗ್ಗೆ ಚಟುವಟಿಕೆಗಳ ಮೂಲಕ ತರಬೇತಿ ನೀಡಿದ ತಿಪ್ಪೇಸ್ವಾಮಿಯವರು ನಮ್ಮನ್ನು ಬೇರೆ ಯಾರೋ ಸರಿ ಪಡಿಸುತ್ತರೆ ಎಂಬ ಭ್ರಮೆ ಇರಬಾರದು. ಸ್ವ ಅರಿವಿನ ಮೂಲಕ ನಾವೇ ಪ್ರಬುದ್ದರಾಗಬೇಕು ಎಂದು ತಿಳಿಸಿದರು.

       ಶಿಬಿರದಲ್ಲಿ ಸೆಂಟ್ರಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷರಾದ ಓ ನಮೋ ನಾರಾಯಣ, ಕಾರ್ಯದರ್ಶಿ ಮಹೇಶ್, ಮುಖ್ಯ ಶಿಕ್ಷಕ ಶಿವಣ್ಣ, ನವ್ಯದಿಶ ಟ್ರಸ್ಟ್ ನ ಕಾರ್ಯಕ್ರಮ ಅಧಿಕಾರಿ ಮಹದೇವ ಪಾಟೀಲ್, ಶುಶಿಕ್ಷಣ ಯೋಜನ ಸಂಯೋಜಕ ಮಂಜುನಾಥ್, ಅಬಿವೃದ್ಧಿ ಅಧಿಕಾರಿಗಳಾದ ರಾಜಶೇಖರ, ಈರನಗೌಡ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap