ರಾಯಪುರ:
ಮೂಢನಂಬಿಕೆಗೊಳಗಾದ ದಂಪತಿಗಳು ನಾಗದೇವನ ಆಶೀರ್ವಾದ ಪಡೆಯಬೇಕೆಂದು ಮಗುವನ್ನು ಹಾವಾಡಿಗ ಸುಪರ್ದಿಗೆ ನೀಡಿದ್ದು ಈ ವೇಳೆ ವಿಷಪೂರಿತ ನಾಗರಹಾವು ಕಚ್ಚಿದ್ದರಿಂದ 5 ತಿಂಗಳ ಮಗು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ.
ಮಗು ಪದೇ ಪದೇ ಅನಾರೋಗ್ಯಕ್ಕೀಡಾಗುತ್ತಿದ್ದು ಇದರಿಂದ ದಂಪತಿಗಳು ನೊಂದಿದ್ದರು. ಈ ಇದೇ ಹಾವಾಡಿಗನೊಬ್ಬ ನಾಗರ ದೇವನ ಆಚರಣೆ ಮಾಡಿದರೆ ನಿಮ್ಮ ಮಗುವಿನ ಆರೋಗ್ಯ ಸುಧಾರಿಸುತ್ತದೆ ಎಂದು ಹೇಳಿದ್ದಾನೆ. ಇದನ್ನು ನಂಬಿದ ದಂಪತಿಗಳು, ಮಗುವನ್ನು ಹಾವಾಡಿಗನ ಸುಪರ್ದಿಗೆ ನೀಡಿದ್ದರು.
ಪೂಜಾ ವಿಧಿವಿಧಾನಗಳು ನಡೆಯುತ್ತಿದ್ದಾಗ ವಿಷಪೂರಿತ ನಾಗರಹಾವು ಮಗುವಿಗೆ ಕಚ್ಚಿದೆ. ಆದರೆ ಹಾವು ವಿಷರಹಿತ ಎಂದ ಹಾವಾಡಿಗ ಎರಡು ಗಂಟೆಗಳವರೆಗೆ ಆಚರಣೆಗಳನ್ನು ಮುಂದುವರೆಸಿದ್ದಾನೆ. ಮಗುವಿನ ಉಸಿರು ನಿಧಾನವಾಗುತ್ತಿದ್ದಂತೆ ಹೌಹಾರಿದ ಪೋಷಕರು ಅದನ್ನೆತ್ತಿಕೊಂಡು ಆಸ್ಪತ್ರೆಗೆ ಓಡಿದ್ದಾರೆ. ಆದರೆ ಅದಾಗಲೇ ಮಗುವಿನ ದೇಹಕ್ಕೆ ಸಂಪೂರ್ಣವಾಗಿ ವಿಷವ್ಯಾಪಿಸಿದ್ದು ಕೊನೆಯುಸಿರೆಳೆದಿದೆ.