ತಿಪಟೂರು :
ನಗರದಲ್ಲಿ ಕಳೆದ ವಾರದಿಂದ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜನರ ಆತಂಕಕ್ಕೆಕಾರಣವಾಗಿದೆ.
ನಗರದ ಬಿ.ಹೆಚ್.ರಸ್ತೆಯಲ್ಲಿ ಹಾಗೂ ಎಲೆ ಆಸರದಲ್ಲಿ ಕಳ್ಳತನಗಳು ಆಗುತ್ತಿವೆ. ಕಳ್ಳತನ ಮಾಡುವರು ಅಂಗಡಿಗಳಲ್ಲಿ ಇರುವ ವಸ್ತುಗಳನ್ನು ಮುಟ್ಟದೇ ಕೇವಲ ಗಲ್ಲಾಪೆಟ್ಟಿಗೆಯಲ್ಲಿಇರುವ ಹಣವನ್ನು ಮಾತ್ರ ಕಳ್ಳತನಮಾಡುತ್ತಿದ್ದಾರೆ. ಜೊತೆಗೆ ನಗರದಲ್ಲಿ ಅಳವಡಿಸಿರುವ ಸಿ.ಸಿ.ಟಿ.ವಿ ಗಳಲ್ಲಿ ದಾಖಲಾಗಿರುವಂತೆರಾತ್ರಿಯ ಹೊತ್ತುರೈಲಿನಲ್ಲಿ ಆಗಮಿಸುವ ಆಗುಂತಕರು ಸಂಪೂರ್ಣ ಮುಖವನ್ನುಕಾಣದಂತೆ ಮರೆಮಾಚಿಕೊಳ್ಳುವುದರ ಜೊತೆಗೆತಮ್ಮ ವೇಷವನ್ನು ಪದೇ ಪದೇ ಬದಲಾಯಿಸುತ್ತಿರುವುದುಕಂಡು ಬಂದಿದೆ.
ಬಿ.ಹೆಚ್.ರಸ್ತೆಯಲ್ಲಿರುವ ಎಸ್ಸೇ ವೇಯಿಂಗ್ ಯಂತ್ರದ ಅಂಗಡಿಯಲ್ಲಿ ಕಳ್ಳತನವಾಗಿದ್ದು ಅಂಗಡಿಯ ಸಿ.ಸಿ.ಟಿ.ವಿ ಯಲ್ಲಿ ದಾಖಲಾಗಿದೆ. ಇದರಲ್ಲಿ ಕಳ್ಳರು ಚಾಣಾಕ್ಷತನದಿಂದ ಅಂಗಡಿಯ ಗಲ್ಲಾಪೆಟ್ಟಿಗೆಯನ್ನು ಹೊಡೆದು ಹಣವನ್ನುದೋಚಿರುವುದು ಸೆರೆಯಾಗಿದ್ದು.ರಾತ್ರಿರೈಲಿನಲ್ಲಿ ಬರುವ ಆಗುಂತಕರು ಕಳ್ಳತನಮಾಡಿ ಮತ್ತೆರೈಲಿನಲ್ಲಿ ಹೋಗುತ್ತಿರಬಹುದೆಂಬ ಗುಮಾನಿಯೂ ಹೆಚ್ಚಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
